More

    ಖಾತ್ರಿ ಅನುಷ್ಠಾನಕ್ಕೆ ವಿಶೇಷ ಆದ್ಯತೆ

    ಹಿರಿಯೂರು: ಕರೊನಾ ಹಿನ್ನೆಲೆಯಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂದರ್ಭ ಬಡ ಕೂಲಿ ಕಾರ್ಮಿಕರಿಗೆ ನೆರವಾಗಲು ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹೊನ್ನಾಂಬಾ ಹೇಳಿದರು.

    ತಾಲೂಕಿನ ಗನ್ನಾಯಕನಹಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಮೀನಿನಲ್ಲಿ ಬದು ನಿರ್ಮಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚಳ, ಮಳೆ ನೀರು ಸಂರಕ್ಷಣೆ, ಭೂ ಸವಕಳಿ ತಪ್ಪಿಸಬಹುದು ಎಂದರು.

    ತಾಪಂ ಇಒ ಹನುಮಂತಪ್ಪ ಮಾತನಾಡಿ, ಮಳೆಗಾಲ ಆರಂಭವಾಗುವ ಮುನ್ನವೇ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗೆ ಅವಕಾಶವಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೆಂಗು, ಪಪ್ಪಾಯ ಇತರೆ ಬೆಳೆಗಳ ನಾಟಿ ಮಾಡಬಹುದು ಎಂದು ತಿಳಿಸಿದರು.

    ಜಿಪಂ ಡಿ.ಎಸ್.ರಂಗಸ್ವಾಮಿ, ತ್ಯಾಗರಾಜ್, ಪಿಡಿಒ ಸವಿತಾ ಬಾಯಿ, ಮೋಹನ್, ಜಗದೀಶ್, ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts