More

    ಕರೊನಾ ವಿರುದ್ಧ ಯುದ್ಧಕ್ಕೆ ಧುಮುಕಿನ ಜನ ನಾಯಕರು

    ಹಿರಿಯೂರು: ಲಾಕ್‌ಡೌನ್ ಸಂಕಷ್ಟದಲ್ಲಿದ್ದ ಜನರ ನೆರವಿಗೆ ಧಾವಿಸದ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು-ನಾಯಕರು ವಿಜಯವಾಣಿ ವರದಿಯಿಂದ ಎಚ್ಚತ್ತು ಕರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

    ಸಮಸ್ಯೆಗೆ ಸ್ಪಂದಿಸುವಲ್ಲಿ ಪಕ್ಷಗಳು ವಿಫಲ ಎಂಬ ವರದಿ ಪ್ರಕಟಿಸಿದ ಬಳಿಕ ಮೂರು ಪಕ್ಷದ ರಾಜಕೀಯ ನಾಯಕರು ಬೀದಿಗಿಳಿದು ಗ್ರಾಮೀಣ ಭಾಗದಲ್ಲಿ ಕರೊನಾ ಜಾಗೃತಿ ಜತೆಗೆ ಕ್ಲೋರಿನೇಷನ್ ಸಿಂಪಡಣೆ, ದಿನಸಿ ಕಿಟ್, ಹಣ್ಣು-ತರಕಾರಿ ವಿತರಿಸುವ ಸೇವಾ ಕಾರ್ಯ ಕೈಗೊಂಡಿದ್ದಾರೆ.

    ಬಡವರು-ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದು, ತಡವಾದರು ತಮ್ಮ ಬಗ್ಗೆ ಕಾಳಜಿ ತೋರಿದ ಜನಪ್ರತಿನಿಧಿಗಳ ಸೇವೆಗೆ ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಬಿಜೆಪಿ: ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಅವರು, ಕತ್ತು ಹಾಗೂ ಬೆನ್ನು ನೋವಿನ ಕಾರಣ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅವರ ಪರವಾಗಿ ಪತಿ ಹಾಗೂ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ತಾಲೂಕಿನ ವಿವಿಧೆಡೆ ಭೇಟಿ ನೀಡಿ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸುತ್ತಿದ್ದಾರೆ.

    ಕಾಂಗ್ರೆಸ್ ವಿರೋಧ ಪಕ್ಷವಾಗಿ ಲಾಕ್‌ಡೌನ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾದ ಸಂದರ್ಭದಲ್ಲಿ ಪಕ್ಷದ ಮುಖಂಡ, ವಿವಿ ಪುರ ಜಿಪಂ ಕ್ಷೇತ್ರದ ಸದಸ್ಯ ಆರ್.ನಾಗೇಂದ್ರನಾಯ್ಕ ಸ್ವಂತ ಖರ್ಚಿನಿಂದ ಕ್ಲೋರಿನೇಷನ್ ಸಿಂಪಡಣೆ ಮಾಡಿ, ಅಧಿಕಾರಿಗಳ ಜತೆಗೂಡಿ ಕರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    10 ವರ್ಷ ಜನಪರ ಕೆಲಸದ ಜತೆ, ಕ್ಷೇತ್ರದ ಜನರ ಕಷ್ಟ-ಸುಖದಲ್ಲಿ ಭಾಗಿಯಾಗಿ ನೆರವಿನ ಹಸ್ತ ಚಾಚಿದ್ದ ಡಿ.ಸುಧಾಕರ್ ಅವರು 2019ರ ಚುನಾವಣೆಯಲ್ಲಿ ಸೋತ ನಂತರ, ಬೇಸರದಿಂದ ಕ್ಷೇತ್ರದಿಂದ ದೂರ ಉಳಿದಿದ್ದರು. ಪಕ್ಷದ ಕಾರ್ಯಕರ್ತರ ಒತ್ತಾಸೆಗೆ ಮಣಿದು ಅಖಾಡಕ್ಕೆ ಇಳಿದಿದ್ದಾರೆ.

    ಜೆಡಿಎಸ್: ನಿಷ್ಠಾವಂತ ಕಾರ್ಯಕರ್ತರ ಪಡೆ ಇದ್ದರೂ ಸಮರ್ಥ ನಾಯಕತ್ವವಿಲ್ಲದೆ ಕಳೆಗುಂದಿರುವ ತೆನೆ ಅಲ್ಪ-ಸ್ವಲ್ಪ ನೆಲೆ ಉಳಿಸಿಕೊಂಡಿದ್ದು, ಧರ್ಮಪುರ ಜಿಪಂ ಕ್ಷೇತ್ರದ ಸದಸ್ಯೆ ತ್ರಿವೇಣಿ ಶಿವಪ್ರಸಾದ್ ಗೌಡ ಹಾಗೂ ರಂಗೇನಹಳ್ಳಿ ತಾಪಂ ಸದಸ್ಯ ಶಂಕರಮೂರ್ತಿ ಬೀದಿಗಿಳಿದು ಜನರ ನೆರವಿಗೆ ಧಾವಿಸಿದ್ದಾರೆ.

    ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ನೇತೃತ್ವದ ಕಾರ್ಯಕರ್ತ ಪಡೆ, ನಗರಸಭೆ ಸದಸ್ಯರು, ಶಾಸಕರ ಬೆಂಬಲಿಗರು ಬಡವರು-ನಿರ್ಗತಿಕರ ನೆರವಿಗೆ ಬಂದಿದ್ದಾರೆ.

    ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿಕೆ: ಪತ್ರಿಕಾ ಮಾಧ್ಯಮ ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ, ಆಡಳಿತ-ವಿರೋಧ ಪಕ್ಷದ ನಾಯಕರನ್ನು ಸದಾ ಎಚ್ಚರಿಸುವ ಮೂಲಕ, ಬಡ ಜನ-ನಿರ್ಗತಿಕರ ಪಾಲಿನ ಆಶಾಕಿರಣವಾಗಿ ವಿಜಯವಾಣಿ ಕನ್ನಡಿಗರ ಧ್ವನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts