More

    ಯರ‌್ರಿತಾತ ಸ್ವಾಮಿ ಜಾತ್ರೋತ್ಸವ

    ಹಿರಿಯೂರು: ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಯರ‌್ರಿತಾತ ಸ್ವಾಮಿ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು.

    ದೇವಸ್ಥಾನದಲ್ಲಿ ಶ್ರೀಸ್ವಾಮಿಗೆ ಅಭಿಷೇಕ, ಗಂಗಾಪೂಜೆ, ಭಜನೆ, ಧ್ವಜಾರೋಹಣ, ಪುಷ್ಪಾಲಂಕಾರ, ಹೋಮ-ಹವನ, ಅನ್ನಸಂತರ್ಪಣೆ, ಮಹಾಮಂಗಳಾರತಿ ಉತ್ಸವ ಮೂರ್ತಿ ಮೆರವಣಿಗೆ ಇತರ ಧಾರ್ಮಿಕ ಕಾರ್ಯ ಜರುಗಿದವು.

    ದೇವರ ಉತ್ಸವ ಮೂರ್ತಿಯನ್ನು ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿ ಪೂರ್ತಿ ಭಜನೆ ಇತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರದುರ್ಗ ಜಿಲ್ಲೆ ಹಾಗೂ ಆಂಧ್ರದಿಂದ ನೂರಾರು ಭಕ್ತರು ಆಗಮಿಸಿದ್ದರು.

    ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮರಾಯ, ಮಾಜಿ ಉಪಾಧ್ಯಕ್ಷರಾದ ಮೀನಾಕ್ಷಿ ಚಿದಾನಂದ್, ಡಿ.ಜಿ.ಗೋವಿಂದರಾಜ್, ದೇವಸ್ಥಾನ ಸೇವಾ ಸಮಿತಿಯ ನಿಂಗಪ್ಪ, ದೇವರಾಜ್, ಶಿವಮೂರ್ತಿ, ಹನುಮಂತರಾಯ, ಗೋವಿಂದಪ್ಪ, ನರಸಿಂಹಮೂರ್ತಿ, ಯಜಮಾನ್ ನಿಂಗಪ್ಪ, ವಿಜಯ್, ಮಾರುತಿ, ಶ್ರೀನಿವಾಸ್, ಚಿದಾನಂದ್, ದಾಸರಿ, ತಿಮ್ಮಯ್ಯ ಇತರರಿದ್ದರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts