More

  ಸಾವಿತ್ರಿ ಬಾಯಿ ಫುಲೆ, ನಿರಕ್ಷರಿಗಳ ಪಾಲಿನ ಸರಸ್ವತಿ

  ಹಿರಿಯೂರು: ಸಾವಿತ್ರಿಬಾಯಿ ಫುಲೆ ದೇಶದ ಮಹಿಳಾ ಶಿಕ್ಷಣದ ಕ್ರಾಂತಿಯ ಜ್ಯೋತಿ. ನಿರಕ್ಷರಿಗಳ ಪಾಲಿನ ನಿಜ ಸರಸ್ವತಿ ಎಂದು ನಗರಸಭೆ ಪೌರಾಯುಕ್ತ ಶಿವಪ್ರಸಾದ್ ಹೇಳಿದರು.

  ಇಲ್ಲಿನ ಬುದ್ಧ ಬೆಳಕು ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

  ಭಾರತೀಯ ಸಮಾಜದ ಹೆಣ್ಣು ಮಕ್ಕಳ ಬಾಳಿನಲ್ಲಿ ಜ್ಞಾನ ದೀಪ ಬೆಳಗಿಸಿದ ಧೀಮಂತ ಮಹಿಳೆ. ಮಹಿಳಾ ಶಿಕ್ಷಣದ ಪರ ದನಿ ಎತ್ತಿದ ಮೊದಲು ಸ್ತ್ರೀ ಎಂಬ ಕೀರ್ತಿ ಫುಲೆ ಅವರಿಗೆ ಸಲ್ಲುತ್ತದೆ ಎಂದರು.

  ಸಂಸ್ಥೆ ಅಧ್ಯಕ್ಷ ಎಂ.ಡಿ. ಚಂದ್ರಶೇಖರ್ ಮಾತನಾಡಿ, ಹಿಂದುಳಿದ ಸಮುದಾಯದಲ್ಲಿ ಜನಿಸಿದ ಸಾವಿತ್ರಿಬಾಯಿ ದೇಶದ ಇತಿಹಾಸದಲ್ಲಿ ಅತ್ಯಂತ ಮಹನೀಯರು ಎಂದರು.
  ನಗರಸಭೆ ಸದಸ್ಯ ಸಣ್ಣಪ್ಪ, ಉಪನ್ಯಾಸಕ ಮಾರುತಿ, ಜೀವೇಶ್, ಸಕ್ಕರ ರಂಗಸ್ವಾಮಿ, ವಿರೂಪಾಕ್ಷಯ್ಯ, ಶ್ರೀಧರ್, ಆಶಾಲತಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts