More

    ಸುವರ್ಣಮುಖಿ ಸೇರಿದ ವಿವಿ ಸಾಗರದ ನೀರು

    ಹಿರಿಯೂರು: ಅನ್ನದಾತರ ಹಿತ ಕಾಯುವುದೇ ನನ್ನ ಮುಖ್ಯ ಗುರಿ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ತಾಲೂಕಿನ ಕುಂದಲಗುರ ಬ್ಯಾರೇಜ್‌ನಿಂದ (ವೇದಾವತಿ ನದಿ ಬಲ ದಂಡೆ) ಸುವರ್ಣಮುಖಿ ನದಿಗೆ 0.1 ಟಿಎಂಸಿ ಅಡಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸುಳ್ಳ ಭರವಸೆಗಳಿಂದ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಸುವರ್ಣಮುಖಿ ನದಿಗೆ ನೀರು ಹರಿಸುವಂತೆ ನದಿ ಪಾತ್ರದ ಜನರು ದಶಕದಿಂದ ಹೋರಾಟ ನಡೆಸುತ್ತಿದ್ದು, ಇಂದು ಜನರ ಕನಸು ನನಸಾಗಿದೆ ಎಂದರು.

    ರೈತ ಮುಖಂಡ ಕಸವನಹಳ್ಳಿ ರಮೇಶ್ ಮಾತನಾಡಿ, ಶಾಸಕಿ ಪೂರ್ಣಿಮಾ ಅವರ ಇಚ್ಛಾಶಕ್ತಿ ಫಲವಾಗಿ ಸುವರ್ಣಮುಖಿ ನದಿಗೆ ನೀರು ಹರಿಸುತ್ತಿರುವುದು ನದಿ ಪಾತ್ರದ ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.

    ಮುಖಂಡರಾದ ದ್ಯಾಮಣ್ಣ, ಮಂಜುನಾಥ್, ರಾಜಣ್ಣ, ಪಾಲಾಕ್ಷ, ನೀರಾವರಿ ಇಲಾಖೆ ಇಂಜಿನಿಯರ್ ಕೃಷ್ಣಮೂರ್ತಿ, ಪರಶುರಾಮ್, ಶಾಸಕರ ಆಪ್ತ ಸಹಾಯಕ ನಿರಂಜನ್ ಮೂರ್ತಿ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts