More

    ಹಿರಿಯೂರಿನಲ್ಲಿ ಮೈಲಾರಲಿಂಗೇಶ್ವರ ಸರಪಳಿ ಪವಾಡ

    ಹಿರಿಯೂರು: ಇಲ್ಲಿನ ಐತಿಹಾಸಿಕ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಸರಪಳಿ ಪವಾಡ ಬುಧವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

    ತಹಸೀಲ್ದಾರ್ ಸತ್ಯನಾರಾಯಣ ಮಧ್ಯಾಹ್ನ 2ಕ್ಕೆ ಸ್ವಾಮಿಗೆ ಪೂಜೆ ಸಲ್ಲಿಸಿ ಸರಪಳಿ ಪವಾಡಕ್ಕೆ ಚಾಲನೆ ನೀಡಿದರು. ಸರಪಳಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿರುವ ತ್ರಿಶೂಲ ಮುದ್ರೆ ಹೊಂದಿರುವ ಕಲ್ಲಿನ ಕಂಬಕ್ಕೆ ಸರಪಳಿ ಬಿಗಿದು ಭಕ್ತರ ಸಮ್ಮುಖದಲ್ಲಿ ಹಾಲುಮತದ ಮನೆತನದ ಮಿಥುನ್ ಎಂಬ ವ್ಯಕ್ತಿ ಸಂಜೆ 5.30ಕ್ಕೆ ಸರಪಳಿ ಎಳೆದರು. 15 ಮೀಟರ್ ಉದ್ದದ ಸರಪಳಿ 5 ಮೀಟರ್ ಅಂತರದಲ್ಲಿ ತುಂಡಾಯಿತು.

    ಉತ್ತಮ ಮಳೆ, ಬೆಳೆ, ಜನ-ಜಾನುವಾರುಗಳಿಗೆ ಒಳ್ಳೆಯಾದಗಲಿದೆ ಎಂದು ಹಿರಿಯರು ಹೇಳಿದರು.
    ಮೈಲಾರದಲ್ಲಿ ನಡೆವ ಕಾರ್ಣೀಕಕ್ಕೂ ಇಲ್ಲಿ ನಡೆಯುವ ಸರಪಳಿ ಪವಾಡದ ಭವಿಷ್ಯದ ಬಗ್ಗೆ ಸಾಮ್ಯತೆ ಇದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಬಯಲು ಸೀಮೆಯ ಭವಿಷ್ಯವಾಣಿ ಎಂದೇ ಪ್ರತೀತಿ ಇರುವ ಮೈಲಾರಲಿಂಗೇಶ್ವರ ಸರಪಳಿ ಪವಾಡದ ವಿಸ್ಮಯ ನೋಡಲು ಜಿಲ್ಲೆಯ ವಿವಿಧೆಡೆಯಿಂದ ನೂರಾರು ಭಕ್ತರು ಪ್ರತಿ ವರ್ಷ ಆಗಮಿಸುತ್ತಿದ್ದರು. ಈ ಬಾರಿ ಕೋವಿಡ್ ಕಾರಣಕ್ಕೆ ಭಕ್ತರ ಸಂಖ್ಯೆ ವಿರಳವಾಗಿತ್ತು.  

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts