More

    ತಾತ್ವಿಕ ನೆಲೆಗಟ್ಟಿನ ಹೋರಾಟ ಗಟ್ಟಿ

    ಹಿರಿಯೂರು: ಯುವಜನತೆ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆದಿಜಾಂಬವ ಮಾದಿಗ ಮಹಾ ಸಂಸ್ಥಾನದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ವಿವಿ ಪುರದ ಮಾರಿಕಣಿವೆ ವನ್ಯಧಾಮದಲ್ಲಿ ದಸಂಸ ಭಾನುವಾರ ಏರ್ಪಡಿಸಿದ್ದ ಒಂದು ದಿನದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂಘಟನೆ ಹುಟ್ಟುಹಾಕುವುದು ಸುಲಭ. ಆದರೆ, ಗುರಿ ಮುಟ್ಟುವುದು ಕಷ್ಟ ಸಾಧ್ಯ. ಇದಕ್ಕೆ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯವಾಗಲಿದೆ ಎಂದರು.

    ದಲಿತ ಸಮುದಾಯಕ್ಕೆ ಅನ್ಯಾಯ ಒದಗಿ ಬಂದಾಗ ತಾತ್ವಿಕ ನೆಲೆಯಲ್ಲಿ ಹೋರಾಟ ಮಾಡಿ ನ್ಯಾಯ ಕಂಡುಕೊಳ್ಳಬೇಕು. ಇದಕ್ಕೆ ಅಂಬೇಡ್ಕರ್ ಅವರ ಜೀವನದ ಹಾದಿ ಉತ್ತಮ ಉದಾಹರಣೆ ಎಂದು ತಿಳಿಸಿದರು.

    ಶೋಷಿತ ವರ್ಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ, ಸರ್ಕಾರಿ, ಸ್ವಯಂ ಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಮುಖ್ಯವಾಗಿ ವೈಚಾರಿಕ ಪ್ರಜ್ಞೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಶೋಷಣೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ದಸಂಸ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ, ಡಾ.ಮಹೇಶ್ ಸರಗೂರು ಮಾತನಾಡಿದರು. ಮೊಳಕಾಲ್ಮೂರು ಪರಮೇಶ್, ಗ್ರಾಪಂ ಸದಸ್ಯ ಎ.ಉಮೇಶ್, ವೀರಭದ್ರಸ್ವಾಮಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts