More

    ನವ ಚೈತನ್ಯಕ್ಕೆ ಯೋಗ ಸಂಜೀವಿನಿ

    ಹಿರಿಯೂರು: ದಿನ ನಿತ್ಯದ ಬದುಕಿಗೆ ಲವ ಲವಿಕೆ ಹಾಗೂ ಆರೋಗ್ಯಕ್ಕೆ ನವ ಚೈತನ್ಯ ತುಂಬಲು ಯೋಗ ಸಂಜೀವಿನಿ ಆಗಿದೆ ಎಂದು ಬಿ.ಕೆ.ಗಾಯತ್ರಿ ಹೇಳಿದರು.

    ನಗರದ ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಥಸಪ್ತಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಒತ್ತಡ ಮುಕ್ತ ಬದುಕಿಗೆ ಯೋಗ ಹೇಳಿ ಮಾಡಿಸಿದ ವಿಧಾನ, ದಿನ ನಿತ್ಯ ಯೋಗ ಮತ್ತು ಪ್ರಾಣಾಯಾಮ ಮಾಡುವ ಅಭ್ಯಾಸ ರೂಡಿಸಿಕೊಂಡರೆ ರೋಗ ನಿರೊಧಕ ಶಕ್ತಿ ವೃದ್ಧಿಯಾಗಿ ಉತ್ತಮ ಜೀವನ ಶೈಲಿ ತಮ್ಮದಾಗುತ್ತದೆ ಎಂದು ತಿಳಿಸಿದರು.

    ಯೋಗ ಸಂಸ್ಕೃತಿ ಇಡೀ ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆ. ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ಜನಪ್ರಿಯವಾಗಿದೆ. ಈ ಬಗ್ಗೆ ನಮ್ಮ ಯುವಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.

    ಸೂರ್ಯ ನಮಸ್ಕಾರದಲ್ಲಿ ನೂರಾರು ಯೋಗಾಸಕ್ತರು ಪಾಲ್ಗೊಂಡರು. ಮಂಜುನಾಥ್, ಗೋಪಾಲ್ ಆಚಾರ್, ರವೀಂದ್ರನಾಥ್, ಕಿರಣ್, ಪ್ರಕಾಶ್, ಪ್ರಶಾಂತ್, ಹರ್ಷಿಣಿ, ಸುಮಾ, ಚೇತನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts