More

    ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ಆಗ್ರಹ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಇಲ್ಲಿನ ಅಜಾದ್ ನಗರದಲ್ಲಿರುವ ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ನಗರದ ಹೃದಯ ಭಾಗದಲ್ಲಿ ಮಂಡಕ್ಕಿ ಭಟ್ಟಿಗಳಲ್ಲಿ ಹಳೆಯ ಟೈರ್ ಬಳಕೆ ಮಾಡುವುದರಿಂದ ವಾತಾವರಣ ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

    ಈ ಬಗ್ಗೆ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು, ನಗರ ಸಭೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಸಧಿಕ್, ಅಹಮ್ಮದ್, ಶಿವಕುಮಾರ್, ಕಾಂತಣ್ಣ, ತಿಪ್ಪೇಸ್ವಾಮಿ ಇತರರು ಅಳಲು ತೋಡಿಕೊಂಡಿದ್ದಾರೆ.

    ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಡಕ್ಕಿ ಭಟ್ಟಿ ಕಾರ್ಯ ಚುರುಕುಗೊಂಡಿದ್ದು, ಚಿಕ್ಕ ಮಕ್ಕಳು-ಹಿರಿಯ ನಾಗರಿಕರು ಉಸಿರಾಟ ತೊಂದರೆ, ಅಲರ್ಜಿ ಇತರೆ ರೋಗಗಳಿಗೆ ತುತ್ತಾಗುತ್ತಿದ್ದಾರೆ.

    ಟೈರ್ ಸೇರಿ ಅನುಪಯುಕ್ತ ವಸ್ತುಗಳ ಬಳಸುವುದರಿಂದ ಬಹಳಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಜನಪ್ರತಿನಿಧಿಗಳು, ಅಧಿಕಾರಿಗಳು ಭಟ್ಟಿಗಳ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಮಂಡಕ್ಕಿ ಭಟ್ಟಿಗಳಲ್ಲಿ ಟೈರ್ ಸುಡುವುದರಿಂದ ಕೆಟ್ಟ ವಾಸನೆ ಜತೆಗೆ ಅನಾರೋಗ್ಯಕ್ಕೆ ಜನತೆ ತುತ್ತಾಗುತ್ತಿದ್ದಾರೆ. ಶಾಸಕರು ಭರವಸೆಯಲ್ಲಿ ಕಾಲದೂಡುತ್ತಿದ್ದಾರೆ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
    ಸಬೀನಾ, ಮುಬೀನಾ ಸ್ಥಳೀಯರು

    ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ಶಾಸಕಿ ಪೂರ್ಣಿಮಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶೀಘ್ರ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.
    ಲೀಲಾವತಿ ಪೌರಾಯುಕ್ತೆ
    ನಗರಸಭೆ, ಹಿರಿಯೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts