More

    ಖಾತ್ರಿ ಯೋಜನೆಯಲ್ಲಿ ಜಿಲ್ಲೆಗೆ ಹಿನ್ನಡೆ

    ಹಿರಿಯೂರು: ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಚಿತ್ರದುರ್ಗ ಜಿಲ್ಲೆ 27ನೇ ಸ್ಥಾನದಲ್ಲಿದ್ದು, ಪಿಡಿಒಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಟಿ.ಯೋಗೇಶ್ ತಾಕೀತು ಮಾಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಪ್ರಗತಿ ಕಾಣುತ್ತಿಲ್ಲ ಎಂದು ಬೇಸರಿಸಿದರು.

    ಪ್ರಸ್ತುತ ಅಂಕಿ ಅಂಶಗಳ ಮಾಹಿತಿ ಗಮನಿಸಿದರೆ ಕೆಲವು ಗ್ರಾಮ ಪಂಚಾಯಿತಿಗಳು ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಪ್ರಗತಿ ಸಾಧಿಸಿರುವುದು ತಿಳಿಯುತ್ತದೆ. ಉಳಿದ ಕಡೆ ನೀರೀಕ್ಷಿತ ಪ್ರಗತಿ ಇಲ್ಲ ಎಂದರು.

    ಮಾನವ ದಿನಗಳ ಸೃಜನೆಯೂ ಇಲ್ಲದಂತಾಗಿದೆ. ಅದರಲ್ಲೂ ಯರಬಳ್ಳಿ, ಕರಿಯಾಲ ಶೂನ್ಯವಾಗಿವೆ. ಯೋಜನೆ ಅಡಿ ಜಮೀನಿನಲ್ಲಿ ಬದು, ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ ಇದೆ. ಇಂತಹ ಕಾರ್ಯಗಳಿಗೆ ಆದ್ಯತೆ ನೀಡಿ ಎಂದು ಹೇಳಿದರು.

    ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರು ನಗರಗಳಿಂದ ಹಳ್ಳಿಗಳಿಗೆ ಬಂದಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಜಾಬ್ ಕಾರ್ಡ್ ಮಾಡಿಸಿಕೊಡುವ ಮೂಲಕ ನರೇಗಾ ಯೋಜನೆಯಡಿ ಕೆಲಸಗಳನ್ನು ಕೊಡಿ ಎಂದು ಸೂಚಿಸಿದರು.

    ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ಸಭೆಯಲ್ಲಿ ಪಿಡಿಒಗಳು ಸಮರ್ಪಕ ಮಾಹಿತಿ ನೀಡಬೇಕು. ತಪ್ಪಿಸಿಕೊಳ್ಳಲು ಸುಳ್ಳು ಮಾಹಿತಿ ನೀಡಿದರೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ವಸತಿ ಮಂಜೂರಾತಿಗಾಗಿ ಗ್ರಾಮ ಪಂಚಾಯಿತಿವಾರು ಸಮೀಕ್ಷೆ ನಡೆಸಿ ಪಟ್ಟಿ ನೀಡುವಂತೆ ಹೇಳಿ ಒಂದೂವರೆ ತಿಂಗಳಾದರೂ ನೀಡಿಲ್ಲ ಎಂದು ದೂರಿದರು.

    ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ, ತಾಪಂ ಇಒ ಹನುಮಂತಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts