More

    ದಮನಿತರ ಭಾಗ್ಯದ ಬೆಳಕು

    ಹಿರಿಯೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಸ್ವಾಭಿಮಾನಿ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಉಮೇಶ್ ಬಣ್ಣಿಸಿದರು.

    ತಾಲೂಕಿನ ವಿವಿ ಪುರದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ (ಟಿ.ಡಿ.ರಾಜಗಿರಿ ಬಣ) ಹಾಗೂ ಅಂಬೇಡ್ಕರ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಅನ್ಯಾಯ, ಅಸಮಾನತೆ ಹಾಗೂ ಶೋಷಣೆ ವಿರುದ್ಧದ ಎಲ್ಲ ಚಳವಳಿಗೆ ಇಂದಿಗೂ ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆಗಳೇ ಬಳುವಳಿ. ದೇಶದ ಜನರಿಗೆ ಅವರೇ ಸ್ಫೂರ್ತಿ ಮತ್ತು ಆಶಾಕಿರಣ ಎಂದರು.

    ತಾಲೂಕು ಡಿಎಸ್‌ಎಸ್ ಅಧ್ಯಕ್ಷ ವೀರಭದ್ರಪ್ಪ, ದೇವರಾಜ್, ನಾಗರಾಜ್, ಗುರುಪ್ರಸಾದ್, ರಾಮಪ್ಪ, ಪಾತಪ್ಪ, ಚನ್ನಪ್ಪ, ತಿಪ್ಪೇಸ್ವಾಮಿ, ಅಬ್ದುಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts