More

    ವಿದ್ಯಾರ್ಥಿಗಳಿಗೆ ಪರಿಸರ ಮಹತ್ವ ತಿಳಿಸಿರಿ

    ಕುಷ್ಟಗಿ: ಪರಿಸರ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲೂ ಇದೆ ಎಂದು ನಿಡಶೇಸಿಯ ಚನ್ನಬಸವೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಹಿರೇಮನ್ನಾಪುರದ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳು ಪರಿಸರ ಬೆಳೆಸಲಿ

    ಗಿಡಗಳ ನಾಶದಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಸ್ಥಳಾವಕಾಶ ಇದ್ದಲ್ಲೆಲ್ಲ ಸಸಿ ನೆಟ್ಟು ಪೋಷಿಸುವ ಕಾರ್ಯವಾಗಬೇಕಿದೆ. ವಿವಿಧ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸಸಿಗಳನ್ನು ಕೊಡುಗೆಯಾಗಿ ನೀಡುವ ಪರಿಪಾಠ ಬೆಳಸಿಕೊಳ್ಳಬೇಕಿದೆ. ಶಾಲೆ ಕಾಲೇಜುಗಳ ಆವರಣಗಳಲ್ಲಿ ವಿದ್ಯಾರ್ಥಿಗಳಿಂದ ಸಸಿ ನೆಡಿಸಿ ಪರಿಸರದ ಮಹತ್ವ ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದರು.

    ಇದನ್ನೂ ಓದಿ: ಸಲ್ಮಾನ್, ದೀಪಿಕಾ ಪಡುಕೋಣೆಯಿಂದ ಶಾರುಖ್​​​​​ವರೆಗೆ…ಈ ಸೆಲೆಬ್ರಿಟಿಗಳಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ

    ನಿವೃತ್ತ ದೈಹಿಕ ಶಿಕ್ಷಕ ವಿ.ಎಸ್.ಕಾಡಗಿಮಠ, ವಿಜ್ಞಾನ ಶಿಕ್ಷಕ ಎಸ್.ವೈ.ಕಂಚಿ, ಹಿಂದಿ ವಿಷಯ ಶಿಕ್ಷಕ ಶಿವಾನಂದ ಹಿರೇಮಠ, ಪ್ರಮುಖರಾದ ಕಳಕಪ್ಪ ಪುರದ್, ಬಸಪ್ಪ ಕತ್ತಿ, ಶರಣಯ್ಯ ಹಿರೇಮಠ, ಪಂಪಾಪತಿ ಸಾಸ್ವಿಹಾಳ, ಬಾಲಚಂದ್ರಪ್ಪ ಬಳಿಗಾರ ಇತರರಿದ್ದರು. ಒಟ್ಟು 1200 ಸಸಿಗಳನ್ನು ಶಾಲೆ, ವಿವಿಧ ಸಂಘ ಸಂಸ್ಥೆ ಹಾಗೂ ರೈತರಿಗೆ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts