More

    ಗವಿಸಿದ್ಧೇಶ್ವರ ಜಾತ್ರೆ; ಹಿರೇಮನ್ನಾಪುರದಲ್ಲಿ ಶೇಂಗಾ ಹೋಳಿಗೆ, ರೊಟ್ಟಿ, ಬೂಂದಿ ತಯಾರಿ

    ಕುಷ್ಟಗಿ: ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಭಕ್ತರು ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಕಳಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಅದರಂತೆ ಹಿರೇಮನ್ನಾಪುರದಲ್ಲಿ ಶೇಂಗಾ ಹೋಳಿಗೆ, ರೊಟ್ಟಿ ಜತೆಗೆ ಬೂಂದಿ(ಲಡ್ಡು) ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.

    ಇಲ್ಲಿನ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಹಳೆಯ ವಿದ್ಯಾರ್ಥಿಗಳು 101 ಕ್ವಿಂಟಾಲ್ ಶೇಂಗಾ ಹೋಳಿಗೆ ತಯಾರಿಸಿ ಕೊಡಲು ನಾನಾ ಹಳ್ಳಿಗಳಿಗೆ ಶೇಂಗಾ, ಬೆಲ್ಲ, ಹಿಟ್ಟು ವಿತರಿಸಿದ್ದಾರೆ. ಹಿರೇಮನ್ನಾಪುರ ಗ್ರಾಮಕ್ಕೂ 5 ಕ್ವಿಂಟಾಲ್ ಶೇಂಗಾ, 3.5 ಕ್ವಿಂಟಾಲ್ ಬೆಲ್ಲ ಹಾಗೂ 1 ಕ್ವಿಂಟಾಲ್ ಮೈದಾ ಹಿಟ್ಟು ಮನೆ ಮನೆಗೆ ಕೊಟ್ಟಿದ್ದಾರೆ. ಮನೆ ಮನೆಗಳಲ್ಲಿ ಹೆಣ್ಣು ಮಕ್ಕಳು ಶೇಂಗಾ ಹೋಳಿಗೆ ತಯಾರಿಸುತ್ತಿದ್ದಾರೆ. ರೊಟ್ಟಿಗಳನ್ನು ಜಾತ್ರೆಯ ದಾಸೋಹಕ್ಕೆ ಹೋಳಿಗೆಯ ಜತೆಗೆ ಕಳುಹಿಸಿಕೊಡಲು ಶರಣಬಸವೇಶ್ವರ ದೇವಸ್ಥಾನದಲ್ಲಿ ಸಂಗ್ರಹಿಸಲಾಗಿದೆ.

    10 ಕ್ವಿಂಟಾಲ್ ಬೂಂದಿ ತಯಾರಿ: ಗ್ರಾಮಸ್ಥರೆಲ್ಲ ಸೇರಿ ಗವಿಮಠ ಜಾತ್ರೆಗೆ 10 ಕ್ವಿಂಟಾಲ್ ಬೂಂದಿ(ಲಡ್ಡು) ತಯಾರಿಸುತ್ತಿದ್ದಾರೆ. ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬೂಂದಿ ಸಿದ್ಧಪಡಿಸುತ್ತಿದ್ದು, ಗವಿಸಿದ್ಧೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಬೂಂದಿಯ ಉಂಡೆಗಳನ್ನು ತಯಾರಿಸಲು ಸಾಥ್ ನೀಡಿದ್ದಾರೆ. ಸಂಗಮೇಶ ಪುರದ್ ನೇತೃತ್ವದ ಯುವಕರ ತಂಡ 101ಕೆಜಿ ಶೇಂಗಾ ಚಟ್ನಿ ತಯಾರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts