More

    ದೇಗುಲ, ಪಾರಂಪರಿಕ ತಾಣಗಳ ಸಂರಕ್ಷಣೆಯಾಗಲಿ

    ಚಿಕ್ಕಮಗಳೂರು: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ವಿುಕ ತಾಣಗಳಾಗಿ ಪ್ರಾಚೀನ ದೇವಾಲಯಗಳು ಅಭಿವೃದ್ಧಿ ಹೊಂದಬೇಕು. ಈ ದಿಸೆಯಲ್ಲಿ ನಶಿಸಿಹೋಗುತ್ತಿರುವ ಶಿಲ್ಪಕಲೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

    ಹಿರೇಮಗಳೂರಲ್ಲಿ ಶುಕ್ರವಾರ ಅಳಸಿಂಗ ವೇದಿಕೆ ಆಯೋಜಿಸಿದ್ದ ಅಳಸಿಂಗ ಪೆರುಮಾಳ್ ಅವರ ಅಪರೂಪದ ನುಡಿಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಪ್ರಾಚೀನ ದೇಗುಲಗಳು, ಶಿಲ್ಪಕಲೆಗಳು ಸೇರಿ ಇಲ್ಲಿಯ ಪಾರಂಪರಿಕ ಚಿತ್ರಣ ಒಳಗೊಂಡ ಸಿಡಿ ತಯಾರಿಸಿ ಜನರಿಗೆ ಅವುಗಳನ್ನೇ ಬಹುಮಾನವಾಗಿ ನೀಡಬೇಕು. ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ಸಂದರ್ಭ ಕವಿಗಳು, ವಿಜ್ಞಾನಿಗಳು ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಮಹನೀಯರ ಜನ್ಮ ಸ್ಥಳಗಳನ್ನು ಭೇಟಿ ಮಾಡಿಸುವ ಪ್ರವಾಸ ಏರ್ಪಡಿಸಬೇಕು ಎಂದರು.

    ಅಲ್ಲಲ್ಲಿ ಡಿಜಿಟಲ್ ಪರದೆ ಅಳವಡಿಸಿ, ಅವುಗಳಲ್ಲಿ ಜಿಲ್ಲೆಯ ಮಹತ್ವ ಪ್ರದರ್ಶಿಸುವ ಮೂಲಕ ಜನರಿಗೆ ಚಿಕ್ಕಮಗಳೂರಿನ ಪ್ರಾಕೃತಿಕ ಸೌಂದರ್ಯ ಕಾಣುವಂತಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರಲ್ಲಿ ಇದನ್ನೆಲ್ಲ ಅನುಷ್ಠಾನಗೊಳಿಸುವ ಸಂಕಲ್ಪ ಶಕ್ತಿ ಇದೆ. ಅದನ್ನು ಅವರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts