More

    ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

    ಕನಕಗಿರಿ: ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶನಿವಾರ ಸಡಗರದಿಂದ ಆಚರಿಸಲಾಯಿತು.
    ಜಯಂತಿ ನಿಮಿತ್ತ ಗ್ರಾಮದ ಆಂಜನೇಯ ದೇವಸ್ಥಾನದಿಂದ ವಾಲ್ಮೀಕಿ ದೇವಸ್ಥಾನದವರೆಗೆ ಮಹರ್ಷಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸ, ಕುಂಭಗಳನ್ನು ಹೊತ್ತು ಸಾಗಿದರು. ರಾಮಾಯಣ ಸನ್ನಿವೇಶದ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಯುವಕರು ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು.

    ಗಮನ ಸೆಳೆದ ರಾಮಾಯಣ ಸನ್ನಿವೇಶದ ವೇಷಧಾರಿಗಳು

    ಪಾಳೇಗಾರರಾದ ಸುರಪುರ ವೆಂಕಟಪ್ಪ ನಾಯಕ, ಸಿಂಧೂರ ಲಕ್ಷ್ಮಣ, ಲವ-ಕುಶ, ಬೇಡರ ಕಣ್ಣಪ್ಪ, ಉಡಚಪ್ಪ ನಾಯಕ ಅವರ ಭಾವಚಿತ್ರ ಪ್ರದರ್ಶನಗೊಂಡವು. ಗ್ರಾಪಂ ಅಧ್ಯಕ್ಷ ಕರಿಯಪ್ಪ ಗೋಡಿನಾಳ, ಉಪಾಧ್ಯಕ್ಷೆ ಲಚಮಮ್ಮ ನಡಲಮನಿ, ಪ್ರಮುಖರಾದ ಬಾರೇಶ ನಡಲಮನಿ, ಹನುಮೇಶ ನಾಯಕ, ನಾಗಪ್ಪ ಹುಗ್ಗಿ, ಯಮನೂರಪ್ಪ ಬಂಗಾರಿ, ಭೀಮನಗೌಡ, ಯಂಕನಗೌಡ, ಮುದಿಯಪ್ಪ ಮಲ್ಲಿಗೆವಾಡ, ಸಿದ್ದೇಶ, ಬಾರಿಮರದಪ್ಪ, ಹನುಮಂತಪ್ಪ ಬಂಡ್ರಾಳ ಇತರರಿದ್ದರು.

    ಇದನ್ನೂ ಓದಿ: ರಾಜ್ಯಧ್ಯಕ್ಷ ಸ್ಥಾನದ ಜವಾಬ್ಧಾರಿ ಸ್ವೀಕಾರದ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts