More

    ಹಿರೇಬಾಗೇವಾಡಿ ಗ್ರಾಮ ಅಭಿವೃದ್ಧಿಗೆ ನಿರಂತರ ಪ್ರಯತ್ನ

    ಹಿರೇಬಾಗೇವಾಡಿ: ಓರ್ವ ಮಹಿಳಾ ಶಾಸಕಿಯಾಗಿ ಪ್ರಾಮಾಣಿಕತೆಯಿಂದ ಅಧಿಕಾರ ಸದ್ಬಳಕೆ ಮಾಡಿಕೊಂಡು ಹಿರೇಬಾಗೇವಾಡಿ ಗ್ರಾಮ ಅಭಿವೃದ್ಧಿಗೆ ಪ್ರತಿ ಹಂತದಲ್ಲಿಯೂ ಪ್ರಯತ್ತಿಸುತ್ತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಡಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಲ್ಲಿನ ಶಿವಾಲಯ ದೇವಸ್ಥಾನದ ಅನ್ನ ಸಂತರ್ಪಣಾ ಭವನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ 2 ಕೋಟಿ ರೂ. ಅನುದಾನದಲ್ಲಿ ಹಿರೇಬಾಗೇವಾಡಿ ಕೆರೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದರು.

    ಮಲಪ್ರಭಾ ನದಿಯಿಂದ ಹಿರೇಬಾಗೇವಾಡಿ ಸಿದ್ದನಭಾವಿ ಕೆರೆ ತುಂಬಿಸುವ ಬೃಹತ್ ಯೋಜನೆ ಕೈಗೊಳ್ಳಲಾಗಿದೆ. ಇಲ್ಲಿನ ಗ್ರಾಪಂ ಕಚೇರಿ ಕಟ್ಟಡ ಹಳೆಯದಾಗಿದ್ದು, ಜನರ ಬೇಡಿಕೆಯಂತೆ ಹೊಸ ಕಟ್ಟಡ ನಿರ್ಮಾಣಕ್ಕೆ 28 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದ ಅವರು, ಗ್ರಾಮದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ಇಟಗಿ, ಉಪಾಧ್ಯಕ್ಷೆ ನಾಝರೀನ್‌ಬಾನು ಕರಿದಾವಲ್ ಸೇರಿ ಗ್ರಾಪಂ ಸದಸ್ಯರನ್ನು ಶಿವಾಲಯ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ವೇದಮೂರ್ತಿ ಗದಗಯ್ಯಸ್ವಾಮಿ ಹಿರೇಮಠ ಪೂಜೆ ನೆರವೇರಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಗೌರವ್ವ ಪಾಟೀಲ, ಬಿ.ಎನ್.ಪಾಟೀಲ, ರಾಜು ಮೆಳೇದ, ಜಯರಾಮ ಶೆಟ್ಟಿ, ಶಿವಲಿಂಗಯ್ಯ ಏಣಗಿಮಠ, ನಾಗಪ್ಪ ನಂದಿ, ವಾಸನಗೌಡ ಪಾಟೀಲ, ಗೌಸ್‌ಮೋದ್ದೀನ್ ಜಾಲಿಕೊಪ್ಪ, ಅಬ್ಬಾಸ್ ಮುಲ್ಲಾ, ಮಂಜುನಾಥ ಕುಂಬಾರ ಇತರರು ಉಪಸ್ಥಿತರಿದ್ದರು. ಆನಂದ ಕಳಸದ ಸ್ವಾಗತಿಸಿದರು, ಬಿ.ಜಿ. ವಾಲಿಇಟಗಿ ಸ್ವಾಗತಿಸಿದರು. ಸುರೇಶ ಇಟಗಿ ಅಧ್ಯಕ್ಷತೆ ವಹಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts