More

    2 ವರ್ಷದ ಮಗುವನ್ನು ಜೀವಂತ ನುಂಗಿದ ನೀರು ಕುದುರೆ! ಪುಟ್ಟ ಕಂದ ಬದುಕಿ ಬಂದಿದ್ದೇ ರೋಚಕ

    ಕಂಬಾಲ: ನೀರು ಕುದುರೆಯೊಂದು ಎರಡು ವರ್ಷದ ಮಗುವಿನ ಮೇಲೆ ದಾಳಿ ಮಾಡಿರುವ ಘಟನೆ ಉಗಾಂಡದ ಪಶ್ಚಿಮ ಕಾಸೆಸೆಯಲ್ಲಿ ನಡೆದಿದೆ. ಮಗುವನ್ನು ಜೀವಂತ ನುಂಗಿದ ನೀರು ಕುದುರೆ ಕೆಲವೇ ಸಮಯದಲ್ಲಿ ಮಗುವನ್ನು ಜೀವಂತ ಉಗಿದಿದೆ.

    ಈ ಘಟನೆ ಕಳೆದ ಭಾನುವಾರ ನಡೆದಿದೆ. ಬದುಕಿ ಬಂದ ಮಗುವನ್ನು ಇಗಾ ಪೌಲ್​ ಎಂದು ಗುರುತಿಸಲಾಗಿದೆ. ಮನೆಯ ಹೊರಭಾಗದಲ್ಲಿ ಆಟವಾಡುತ್ತಿದ್ದಾಗ ಮಗುವಿನ ತಲೆ ಹಿಡಿದು ಎಳೆದುಕೊಂಡ ನೀರು ಕುದುರೆ ಆತನ ಅರ್ಧ ದೇಹವನ್ನು ನುಂಗಿತ್ತು. ಈ ವೇಳೆ ಸಮೀಪದಲ್ಲಿದ್ದ ಕ್ರಿಸ್​ಪಾಸ್​ ಬ್ಯಾಗೊಂಜಾ ಎಂಬುವರು ಮಗುವಿನ ನೆರವಿಗೆ ಧಾವಿಸಿದರು. ಬ್ಯಾಂಗೋಜ್​ ಕಲ್ಲು ತೂರಿದಾಗ ಹೆದರಿದ ನೀರು ಕುದುರೆ ಮಗುವನ್ನು ಹೊರಗಡೆ ಉಗಿದು ಹತ್ತಿರದಲ್ಲೇ ಇದ್ದ ಕೊಳದ ಕಡೆ ಓಡಿತು.

    ಇದೇ ಮೊದಲ ಬಾರಿಗೆ ನೀರು ಕುದುರೆ ಹೊಳೆಯಿಂದ ಹೊರಗಡೆ ಬಂದು ಮಗುವಿನ ಮೇಲೆ ದಾಳಿ ಮಾಡಿದೆ. ಬಚಾವ್​ ಆದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಮಗುವಿಗೆ ರೇಬಿಸ್​ ಚುಚ್ಚುಮದ್ದನ್ನು ನೀಡಲಾಗಿದೆ.

    ಆಫ್ರಿಕಾದಲ್ಲಿ ನೀರು ಕುದುರೆ ದಾಳಿಗೆ ಪ್ರತಿ ವರ್ಷ ಸುಮಾರು 500 ರಿಂದ 3000 ಮಂದಿ ಸಾಯುತ್ತಾರೆ. (ಏಜೆನ್ಸೀಸ್​)

    https://www.vijayavani.net/attika-babu-alias-bommanahalli-babu-arrested-and-taken-away-by-anantapur-police/

    ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!

    ಮನೆಯೊಂದು ಎರಡು ರಾಜ್ಯ! ಕಿಚನ್​ ಸೇರಿ 5 ಕೊಠಡಿ ತೆಲಂಗಾಣಕ್ಕೆ, ಬೆಡ್​ರೂಮ್​ ಸೇರಿ 5 ಕೋಣೆ ಮಹಾರಾಷ್ಟ್ರಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts