More

    ರಾಮಮಂದಿರ ನಿರ್ವಣಕ್ಕೆ ಸಹಕಾರ ಅಗತ್ಯ

    ಸಾಗರ: ಹಿಂದು ಧರ್ಮದ ಶ್ರದ್ಧಾಭಕ್ತಿಯ ಪ್ರತೀಕವಾದ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಆರ್​ಎಸ್​ಎಸ್ ಮುಖಂಡ ಹನಿಯ ರವಿ ಹೇಳಿದರು.

    ನಗರದಲ್ಲಿ ವಿಎಚ್​ಪಿ ಮತ್ತು ಭಜರಂಗದಳ ರಾಮಮಂದಿರ ನಿರ್ಮಾಣ ಕಾರ್ಯದ ಅಂಗವಾಗಿ ಶನಿವಾರ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, 400 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಮಂದಿರ ಮತ್ತು 1,000 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ, ಗ್ರಂಥಾಲಯ ಸೇರಿ ಇತರೆ ಕಾಮಗಾರಿ ನಡೆಯುತ್ತಿದ್ದು ಎಲ್ಲರೂ ಉದಾರ ದೇಣಿಗೆ ನೀಡುವಂತೆ ಮನವಿ ಮಾಡಿದರು.

    ರಾಮಮಂದಿರ ನಿರ್ಮಾಣ ಭಾರತೀಯರ ಬಹುಕಾಲದ ಕನಸು. ಅದು ನನಸಾಗುವ ಕಾಲ ಸಮೀಪಿಸುತ್ತಿದೆ. ಹಿಂದೆ ರಾಮಮಂದಿರ ನಿರ್ವಣಕ್ಕೆ ಇಟ್ಟಿಗೆ ಸಂಗ್ರಹ ಕಾರ್ಯ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ನಿಧಿ ಸಂಗ್ರಹ ಕಾರ್ಯವನ್ನು ಯಶಸ್ವಿಯಾಗಿ ಮಾಡಬೇಕಿದೆ. 10ರಿಂದ 1,000 ರೂ. ದೇಣಿಗೆಯನ್ನು ಕೂಪನ್ ಮೂಲಕ ಸಂಗ್ರಹಿಸಿದರೆ, 1000 ರೂ. ಮೇಲಿನ ದೇಣಿಗೆಯನ್ನು ರಶೀದಿ ಮೂಲಕ ಸಂಗ್ರಹಿಸಲಾಗುತ್ತದೆ ಎಂದರು.

    ಸಂಘದ ಪ್ರಮುಖರಾದ ಅ.ಪು.ನಾರಾಯಣಪ್ಪ, ಆರಗ ಚಂದ್ರಶೇಖರ್, ರಾಜಾರಾಮ್ ರಾಘವೇಂದ್ರ ಭಟ್, ಐ.ವಿ.ಹೆಗಡೆ, ವಿಎಚ್​ಪಿ ತಾಲೂಕು ಅಧ್ಯಕ್ಷ ರವೀಶ್, ಬಜರಂಗ ದಳದ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ, ರಾಘವೇಂದ್ರ ಕಾಮತ್, ಶಶಿಧರ್, ಕಿರಣ್ ಗೌಡ, ಪ್ರತಿಮಾ ಜೋಗಿ, ಶರಾವತಿ ಸಿ.ರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts