More

    ಸರ್ಕಾರ ಹಲಾಲ್ ಪ್ರಮಾಣ ಪತ್ರವನ್ನು ನಿಷೇಧಿಸಬೇಕು: ಹಿಂದು ಜನ ಜಾಗೃತಿ ಸಮಿತಿ ವಕ್ತಾರ…

    ಬೆಂಗಳೂರು: ಸರ್ಕಾರವು ಕಾನೂನುಬಾಹಿರವಾದ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧವನ್ನು ಹೇರಬೇಕು ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಜಟ್ಕಾ ಮಾಂಸದ ವ್ಯವಸ್ಥೆಯನ್ನು ಮಾಡಬೇಕು. ಜತೆಗೆ ಹಲಾಲ್ ಕಟ್ ಮಾಂಸವನ್ನು ಹಿಂದೂ ಸಮಾಜವು ಬಹಿಷ್ಕರಿಸಿ ಜಟ್ಕಾ ಮಾಂಸವನ್ನು ಖರೀದಿಸಬೇಕು ಎಂದು ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

    ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಿಂದೂ ಜನ ಜಾಗೃತಿಯ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಮಾತನಾಡಿ, ಕಳೆದ ವರ್ಷ ಹಲಾಲ್ ವಿರುದ್ಧ ಅಭಿಯಾನವನ್ನು ಮಾಡಲಾಗಿತ್ತು. ಇದಕ್ಕೆ ಹಿಂದೂ ಸಮಾಜ ನಮ್ಮ ಅಭಿಯಾನಕ್ಕೆ ಅತ್ಯುತ್ತಮವಾದ ಬೆಂಬಲವನ್ನು ನೀಡಿತ್ತು. ಶೇ.೯೦ ರಷ್ಟು ಹಲಾಲ್ ಮಾಂಸ ಬಹಿಷ್ಕರಿಸಲಾಗಿತ್ತು. ಜಟ್ಕಾ ಮಾಂಸ ಅತೀ ಹೆಚ್ಚು ಮಾರಾಟವಾಗಿತ್ತು. ಈ ವರ್ಷವು ಸಹ ನಾವು ಹಲಾಲ್ ಮುಕ್ತ ಯುಗಾದಿ ಹಬ್ಬವನ್ನು ಆಚರಣೆ ಮಾಡಬೇಕೆಂದು ರಾಜ್ಯವ್ಯಾಪಿ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಕಾನೂನಿನ ಕಾರಣ ಮತ್ತು ಧಾರ್ಮಿಕ ಕಾರಣಗಳಿವೆ. ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು ಮಾಡುವ ಸಂದರ್ಭದಲ್ಲಿ ಟನ್‌ಗಟ್ಟಲೇ ಮಾಂಸ ವಿತರಣೆ ಆಗುತ್ತದೆ. ಕೋಟಿಗಟ್ಟಲೆ ವ್ಯಾಪಾರ ವಹಿವಾಟು ನಡೆಯುತ್ತದೆ. ದೇಶದಲ್ಲಿ ಎರಡು ಲಕ್ಷ ಕೋಟಿ ವ್ಯಾಪಾರ ನಡೆಯುತ್ತಿದ್ದು, ಇದರ ಮೇಲೆ ಒಂದೇ ಸಮುದಾಯದ ಹಿಡಿತ ಸಾಧಿಸಿದೆ ಎಂದರು.

    ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳ ಮೇಲೆ ನಿಷೇಧ ಹಾಕಬೇಕೆಂದು ಆಗ್ರಹ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರವು ಸಹ ಹಲಾಲ್ ಪ್ರಮಾಣಪತ್ರವನ್ನು ನಿಷೇಧ ಮಾಡುವುದಾಗಿ ಹೇಳಿತ್ತು. ಹಲಾಲ್ ಪ್ರಮಾಣ ಪತ್ರದ ಮೂಲಕ ದೇಶದ ಅರ್ಥವ್ಯವಸ್ಥೆಗೆ ಪರ್ಯಾಯವಾಗಿ ಪ್ರತ್ಯೇಕ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಸಂಚನ್ನು ಇಸ್ಲಾಮಿಕ್ ಸಂಘಟನೆಗಳು ಮಾಡುತ್ತಿವೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಿದರು.

    ದೇಶದಲ್ಲಿ ಆಹಾರ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಎ್.ಎಸ್.ಎಸ್.ಎ.ಐ ಮತ್ತು ಎ್ಡಿಎ ಅಂತಹ ಸಂಸ್ಥೆಗಳು ಇರುವಾಗ ಹಣ ಪಡೆದುಕೊಂಡು ಇಸ್ಲಾಂ ಪದ್ದತಿಯ ಪ್ರಮಾಣ ನೀಡುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಸುಮಾರು ೫ ಸಾವಿರ ಕೋಟಿ ರೂ. ಹಲಾಲ್ ಪ್ರಮಾಣಪತ್ರದಿಂದ ಸಂಗ್ರಹ ಮಾಡಲಾಗುತ್ತಿದೆ. ಈ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

    ಹಿಂದೂ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಮಾತನಾಡಿ, ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿಯವರ ಅಧ್ಯಕ್ಷತೆಯಲ್ಲಿ ುಡ್ ಕಾರ್ಪೊರೇಷನ್ ಮತ್ತು ುಡ್ ಕಮೀಷನರ್ ಅವರೊಂದಿಗೆ ಸಭೆ ನಡೆದು ೨೦೨೨ ರ ಮಾ.೩೧ ರಂದು ಒಂದು ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಅದರಲ್ಲಿ ಹಲಾಲ್ ಆಹಾರ ಮತ್ತು ಗ್ರಾಹಕರ ಉತ್ಪನ್ನಗಳನ್ನು ಬಹುಸಂಖ್ಯಾತ ಗ್ರಾಹಕರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಗ್ರಾಹಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಸಚಿವರು ಹೊರಡಿಸಿದ್ದರು ಎಂದು ತಿಳಿಸಿದರು.

    ಹಲಾಲ್ ಎಂದರೆ ಏನು?

    ಮೆಕ್ಕಾ ದಿಕ್ಕಿಗೆ ಪ್ರಾಣಿಯ ಮುಖವನ್ನು ತಿರುಗಿಸಿ ಕುರಾನಿನ ಕಲ್ಮಗಳನ್ನು ಹೇಳುತ್ತಾರೆ. ರಕ್ತಸ್ರಾವ ಆಗುವ ಹಾಗೆ ಪ್ರಾಣಿಗಳ ರಕ್ತನಾಳವನ್ನು ಕತ್ತರಿಸುತ್ತಾರೆ. ಅವು ವಿಲ ವಿಲ ಒದ್ದಾಡಿ ಪ್ರಾಣ ಬಿಡುತ್ತದೆ. ಇದಕ್ಕೆ ಹಲಾಲ್ ಮಾಂಸ ಎನ್ನುತ್ತಾರೆ. ಅವರ ದೇವರಿಗೆ ಅಪರ್ಣೆ ಮಾಡಿದನ್ನು ಪುನಃ ಹಿಂದೂ ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಹೀಗಾಗಿ ಇದನ್ನು ಬಹಿಷ್ಕರಿಸಬೇಕು ಎಂದರು.
    ಇದರ ಬದಲಾಗಿ ಹಿಂದೂ ಪದ್ದತಿಯ ಪ್ರಕಾರ ಪ್ರಾಣಿಗಳಿಗೆ ಯಾವುದೇ ವೇದನೆ ಅಥವಾ ತೊಂದರೆ ಕೊಡದೇ ಒಮ್ಮೆಲ್ಲೆ ಪ್ರಾಣ ಹೋಗುವಂತೆ ವದೆ ಮಾಡಲಾಗುವ ಜಟ್ಕಾ ಪದ್ದತಿಯ ಮಾಂಸವನ್ನು ಖರೀದಿಸಿ ಎಂದು ಹಿಂದೂ ಜನ ಜಾಗೃತಿಯ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts