More

    ಪಾಕಿಸ್ತಾನದ ಹೈದರಾಬಾದ್​ನಲ್ಲಿ ಖ್ಯಾತ ಹಿಂದು ವೈದ್ಯನ ಬರ್ಬರ ಹತ್ಯೆ: ಕಾರು ಚಾಲಕ ಅರೆಸ್ಟ್​

    ಕರಾಚಿ: ಪಾಕಿಸ್ತಾನದಲ್ಲಿ ಹಿಂದು ವೈದ್ಯರೊಬ್ಬರ ಬರ್ಬರ ಹತ್ಯೆಯಾಗಿದೆ. ಮೃತರನ್ನು ಧರಮ್​ ದೇವ್​ ರಾಥಿ ಎಂದು ಗುರುತಿಸಲಾಗಿದ್ದು, ಅವರ ಕಾರು ಚಾಲಕನನ್ನು ಬಂಧಿಸಲಾಗಿದೆ.

    ಧರಮ್​ ದೇವ್​ ಅವರು ಪಾಕಿಸ್ತಾನದ ಹೈದರಾಬಾದ್​ನಲ್ಲಿ ಖ್ಯಾತ ಚರ್ಮರೋಗ ವೈದ್ಯರಾಗಿದ್ದರು. ತಮ್ಮ ಚಾಲಕನಿಂದಲೇ ಮನೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಖೈರ್​ಪುರ್​ನಲ್ಲಿರುವ ತನ್ನ ಮನೆಯಲ್ಲಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಮನೆಗೆ ಹೋಗುವಾಗ ಧರಮ್​ ದೇವ್​ ಮತ್ತು ಕಾರು ಚಾಲಕನ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಮಾತಿಗೆ ಮಾತು ಬೆಳೆದು, ಜಗಳ ಅತಿರೇಕಕ್ಕೆ ಹೋಗಿ ತಾಳ್ಮೆ ಕಳೆದುಕೊಂಡ ಚಾಲಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಡಾಕ್ಟರ್​ ಮನೆಯಲ್ಲಿದ್ದ ಅಡುಗೆ ಭಟ್ಟ ಪೊಲೀಸರ ಮುಂದೆ ನೀಡಿದ ಹೇಳಿಕೆ ಆಧಾರದ ಮೇಲೆ ಚಾಲಕನನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಬೆಂಕಿ ಶಮನ ಕಾರ್ಯ ಬಿರುಸು, ಮೂರು ದಿನ ಕಳೆದರೂ ಆರದ ಕಾಡ್ಗಿಚ್ಚು, ಚಾರ್ಮಾಡಿ ಘಾಟ್‌ನಲ್ಲಿ ನೂರಾರು ಪ್ರಾಣಿ, ಪಕ್ಷಿಗಳು ಆಹುತಿ ಶಂಕೆ

    ಕಾರಿನಲ್ಲಿ ಜಗಳವಾಡಿಕೊಂಡು ಮನೆಗೆ ಬಂದ ಚಾಲಕ, ಅಡುಗೆ ಕೋಣೆಗೆ ನುಗ್ಗಿ ಚಾಕು ತೆಗೆದುಕೊಂಡು ಡಾಕ್ಟರ್​ ಕತ್ತು ಸೀಳಿ ಪರಾರಿಯಾದನು ಎಂದು ಅಡುಗೆ ಭಟ್ಟ ಹೇಳಿಕೆ ನೀಡಿದ್ದಾನೆ. ಆರೋಪಿ ಕಾರು ಚಾಲಕನನ್ನು ಹನೀಫ್​ ಲೆಗ್ಹರಿ ಎಂದು ಗುರುತಿಸಲಾಗಿದೆ. ಖೈರ್​ಪುರ್​ನಲ್ಲಿರುವ ತನ್ನ ಮನೆಯಲ್ಲಿ ಇರುವಾಗ ಆತನನ್ನು ಪಾಕ್​ ಪೊಲೀಸರು ಬಂಧಿಸಿದ್ದಾರೆ.

    ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪಾಕ್​ ಪೊಲೀಸರಿಗೆ ಪಾಕಿಸ್ತಾನದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಗೈನ್​ ಚಾಂದ್​ ಎಸ್ಸರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಡಾಕ್ಟರ್​ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಮದ್ವೆಯಾದ ಮರುದಿನವೇ ಬೆಂಗ್ಳೂರು ಟ್ರಾಫಿಕ್​ನಲ್ಲಿ ಪತ್ನಿ ಬಿಟ್ಟು ಪತಿ ಎಸ್ಕೇಪ್​! ಕಾರಣ ಕೇಳಿ ನವವಿವಾಹಿತೆ ಶಾಕ್​

    ಆಹಾರ ನುಂಗಲು ಕಷ್ಟಪಡುತ್ತಿದ್ದ ವ್ಯಕ್ತಿಯ ಅನ್ನನಾಳದಲ್ಲಿ ಸಿಕ್ತು 100ರೂ. 2 ನೋಟು!

    ಭಾರತದ ಮೊದಲ ತೃತೀಯಲಿಂಗಿ ದಂಪತಿಯ ಮಗುವಿಗೆ ನಾಮಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts