More

    ಹಿಂದಿ ರಾಷ್ಟ್ರೀಯ ಭಾಷೆ: ಖ್ಯಾತ ಗಾಯಕ ಸೋನು ನಿಗಮ್​ ಹೇಳಿದ್ದು ಹೀಗೆ

    ನವದೆಹಲಿ: ಇತ್ತೀಚೆಗೆ ಹಿಂದಿ ರಾಷ್ಟ್ರ ಭಾಷೆ ಕುರಿತ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ. ಸಿನಿಮಾ ನಟರಲ್ಲೂ ಟ್ವೀಟ್​ ಜಗಳಕ್ಕೆ ಕಾರಣವಾಗಿತ್ತು.

    ಸದ್ಯ ಈ ಬಗ್ಗೆ ಖ್ಯಾತ ಗಾಯಕ ಸೋನು ನಿಗಮ್​ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಯಾರಿಗೆ ಯಾವ ಭಾಷೆ ಸರಳವಿದೆಯೋ ಅದರಲ್ಲೇ ಮಾತನಾಡುವುದು ತಪ್ಪೇನಿಲ್ಲ ಎಂದು ಹೇಳಿದ್ದಾರೆ.

    ಹಿಂದಿಯನ್ನು ರಾಷ್ಟ್ರಭಾಷೆ ಎಂದು ಎಲ್ಲೂ ಘೋಷಿಸಿಲ್ಲ. ಹಾಗೆ ಭಾರತದಲ್ಲಿ ಹಿಂದಿ ಭಾಷೆಯನ್ನು ಅತಿ ಹೆಚ್ಚು ಮಾತನಾಡುವವರ ಸಂಖ್ಯೆ ಇರುವುದು ಸತ್ಯ. ಹಾಗೆ ತಮಿಳು ಕೂಡ ಅತಿ ಹಳೆಯ ಭಾಷೆಯಾಗಿದೆ. ಇಂಗ್ಲೀಷ್​ ಬರುವುದಿಲ್ಲ, ಹಿಂದಿ ಬರುವುದಿಲ್ಲ ಎಂದಾದರೆ ಅವರ ಮಾತೃಭಾಷೆಯಲ್ಲೇ ಮಾತನಾಡುವುದು ಕೂಡ ಸರಿ ಇದೆ ಎಂದಿದ್ದಾರೆ.

    ನಮ್ಮ ದೇಶ ಈಗಾಗಲೇ ಹಲವು ಆಂತರಿಕ ಸಮಸ್ಯೆಗಳಿಂದ ಸಾಕಾಗಿ ಹೋಗಿದೆ. ಇನ್ನು ಇದನ್ನೂ ವಿವಾದ ಮಾಡದೇ ಸುಮ್ಮನೆ ಅವರವರ ಭಾಷೆಯಲ್ಲಿ ಮಾತನಾಡಿಕೊಂಡು ಇದಕ್ಕೆಲ್ಲಾ ತೆರೆ ಎಳೆಯುವುದು ಒಳ್ಳೆಯದು ಎಂದಿದ್ದಾರೆ.

    ಬೈಕ್​ಗೆ ಕೆಎಸ್​​ಆರ್​​ಟಿಸಿ ಬಸ್​ ಡಿಕ್ಕಿಯಾಗಿ ಸ್ಥಳದಲ್ಲೇ ಯುವಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts