More

    ಹಿಂದಿ-ತೆಲುಗು ಸಿನಿಮಾದಿಂದ ಕನ್ನಡ ಚಿತ್ರಕ್ಕೆ ಕರ್ನಾಟಕದಲ್ಲೇ ಸ್ಕ್ರೀನ್ ಇಲ್ಲವೇ? ನಿರ್ದೇಶಕನ ನೋವು…

    ಬೆಂಗಳೂರು: ಕುರುನಾಡಲ್ಲಿ ಬೇರೆ ಭಾಷೆಯ ಸಿನಿಮಾಗಳಿಂದ ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಹಲವು ತೊಂದರೆಗಳ ಬಗ್ಗೆ ಸ್ಯಾಂಡಲ್​ವುಡ್ ಮಂದಿ ಹಲವಾರು ಬಾರಿ ಬಹಿರಂಗವಾಗಿ ಮಾತಾಡಿದ್ದಾರೆ. ಅದರಲ್ಲಿಯೂ, ಬೇರೆ ಭಾಷೆಯ ಸಿನಿಮಾಗಳಿಂದ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಆಗುತ್ತಿರುವ ಸಮಸ್ಯೆಯ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಅಸಮಾಧಾನ, ಆಕ್ರೋಶ ಹೊರಹಾಕುತ್ತಲೆ ಬಂದಿದ್ದಾರೆ. ಇನ್ನು, ಬೇರೆ ಭಾಷೆಯ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆದರೆ ಸಾಕು ನಮ್ಮ ಪ್ರಾದೇಶಿಕ ಭಾಷೆಯ ಸಣ್ಣ ಬಜೆಟ್ ಚಿತ್ರಗಳಿಗೆ ಸ್ಕ್ರೀನ್​ಗಳು ಸಿಗುವುದು ಕನಸಿನ ಮಾತಾಗಿದೆ.
    ಇದೀಗ, ಒಂದು ಹಿಂದಿ-ತೆಲುಗು ಭಾಷೆಯ ಚಿತ್ರಗಳಿಂದ ಕನ್ನಡ ಸಿನಿಮಾವೊಂದು ಸಮಸ್ಯೆ ಎದುರಿಸುತ್ತಿದೆ. ಇದರ ಬಗ್ಗೆ ಸ್ವತಃ ಆ ಸಿನಿಮಾದ ನಿರ್ದೇಶಕರು ಮಾತಾಡಿದ್ದಾರೆ. ಹೌದು, ಮಾರ್ಚ್ 11 ರಂದು ತೆರೆಕಂಡಿದ್ದ ಕನ್ನಡದ ‘ಹರೀಶ ವಯಸ್ಸು 36’ ಚಿತ್ರಕ್ಕೆ ಕರುನಾಡಲ್ಲೇ ಸ್ಕ್ರೀನ್​ಗಳು ಇಲ್ಲದೇ ಮಕಾಡೆ ಮಲಗಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಗುರುರಾಜ್ ಜ್ಯೇಷ್ಠ, “ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹಲವು ಪ್ರದರ್ಶನ ಸಿಕ್ಕಿದ್ದು ‘ಹರೀಶ ವಯಸ್ಸು 36’ ಗೆದ್ದಿದೆ. ಮಂಗಳೂರಿನ ಮಾಲ್ ಒಂದರಲ್ಲಿ ಹೌಸ್ ಫುಲ್ ಆಗಿದ್ದು, ಮಲ್ಟಿಪ್ಲೆಕ್ಸ್​ಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಿದ್ದರೂ, ಕಹಿ ಸುದ್ದಿಯೊಂದು ಇದೆ. ನಮ್ಮ ಚಿತ್ರದ ಸ್ಕ್ರೀನ್​ಗಳನ್ನು ಕಸಿದುಕೊಂಡು ಬೇರೆ ಸಿನಿಮಾಗಳಿಗೆ ನೀಡಲಾಗುತ್ತಿದೆ.
    ಅವರ ಮಾತು ಮುಂದುವರಿಸುತ್ತಾ, ”ಭಾನುವಾರ ದಂದು ನಮ್ಮ ಚಿತ್ರ ಹೌಸ್ ಫುಲ್ ಆಗಿತ್ತು. ಇಂದು 50 ಪ್ರತಿಶತ ಭರ್ತಿಯಾಗಿದೆ. ಆದರೆ, ಮಂಗಳವಾರ ಯಾವುದೇ ಶೋಗಳಿಲ್ಲ. ಕಾರಣ, ಒಂದು ಹಿಂದಿ ಸಿನಿಮಾ ಬಂದಿದೆ. ಆ ಚಿತ್ರ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ. ಹಿಂದಿ ಚಿತ್ರವನ್ನು ಎಲ್ಲರೂ ನೋಡಿ, ಅದರೆ, ನಮ್ಮ ಪರಿಸ್ಥಿತಿ ಏನು?. ನಿರ್ಮಾಪಕರು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇದು ಬಹಳ ಬೇಸರದ ಸುದ್ದಿ’’ ಎಂದು ನೋವು ಹೊರಹಾಕಿದ್ದಾರೆ ನಿರ್ದೇಶಕರು. ಅಂದಹಾಗೆ, ಈ ನಿರ್ದೇಶಕರು ಮಾತಾಡುತ್ತಿರುವ ಆ ಹಿಂದಿ ಚಿತ್ರ ಯಾವುದು ಅಂತೀರಾ…?
    ಮಾರ್ಚ್ 11 ರಂದು ಇಡೀ ದೇಶದಾದ್ಯಂತ ಎರಡು ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆದವು. ಅವು ಯಾವವು ಅಂದರೆ ಒಂದು ದಿ ಕಾಶ್ಮೀರ ಫೈಲ್ಸ್ಹಿಂದಿ ಚಿತ್ರ ಹಾಗೂ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆದ ರಾಧೆ ಶ್ಯಾಮ್”. ಹೌದು, ಈಗ ರಾಜ್ಯದಲ್ಲಿ ಯಾವುದೇ ಥೆಯೇಟರ್​ಗಳನ್ನು ನೋಡಿದರೂ, ಕೇವಲ ಈ ಎರಡು ಚಿತ್ರಗಳದ್ದೇ ಹವಾ. ಅತಿ ಹೆಚ್ಚು ಶೋಗಳನ್ನು ಪ್ರತಿ ಚಿತ್ರಮಂದಿರದಲ್ಲಿ ಈ ಎರಡು ಸಿನಿಮಾಗಳಿಗೆ ನೀಡಲಾಗುತ್ತಿದೆ. ಇದಕ್ಕೆ, ಸಾಕ್ಷಿ ಎಂದರೆ ಬುಕ್ ಮೈ ಶೋಆ್ಯಪ್. ಈ ಸಿನಿಮಾಗಳು ‘ಹರೀಶ ವಯಸ್ಸು 36’ ಸಿನಿಮಾ ಒಟ್ಟಿಗೆ ಒಂದೇ ದಿನ ತೆರೆ ಕಂಡವು. 
    ಇನ್ನು,ಹರೀಶ ವಯಸ್ಸು 36’ ಚಿತ್ರದಲ್ಲಿ ನಟ ಪುನೀತ್ ರಾಜ್​ಕುಮಾರ್ ಅವರು ಒಂದು ಹಾಡು ಹಾಡಿದ್ದಾರೆ. ಇನ್ನು, ಅಪ್ಪು ಅವರೇ ಒಂದು ಹಾಡು ಹಾಡಿದ ಇಂತಹ ಕನ್ನಡ ಸಿನಿಮಾವೊಂದಕ್ಕೆ ಕರ್ನಾಟಕದಲ್ಲೇ ಸ್ಕ್ರೀನ್ ಇಲ್ಲವೇ ಎಂದು ನಿರ್ದೇಶಕ ಗುರುರಾಜ್ ಅವರು ಪ್ರಶ್ನಿಸುವುದು ತಪ್ಪಿಲ್ಲ ಅನಿಸುತ್ತೆ. ಮತ್ತೊಂದೆಡೆ, ಇದೇ ಕರುನಾಡಲ್ಲಿ ಹಿಂದಿ ಚಿತ್ರಗಳಿಗೆ ತೆರಿಗೆ ವಿನಾಯತಿ ಲಭಿಸುತ್ತಿದೆ. ಹೌದು, ದಿ ಕಾಶ್ಮೀರ ಫೈಲ್ಸ್’ ಸಿನಿಮಾಗೆ ಸಿಎಂ ರಾಜ್ಯದಾದ್ಯಂತ ತೆರಿಗೆ ವಿನಾಯತಿ ಘೋಷಿಸಿದ್ದಾರೆ. ಆದರೆ, ಇತ್ತ ಕನ್ನಡ ಸಿನಿಮಾಗಳು ಕನಿಷ್ಠ ಪಕ್ಷ ಲಾಭ ಮಾಡಲು ಸಾಧ್ಯವಾಗುತ್ತಿಲ್ಲ. 

    ಹಿಂದಿ ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಿದ್ದೀರಿ, ‘ಜೇಮ್ಸ್’ಗೂ ನೀಡಿ: ಸಿಎಂಗೆ ಅಪ್ಪು ಅಭಿಮಾನಿಗಳ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts