More

    ರಷ್ಯಾದ ಪ್ರೇಯಸಿ ಜತೆ ಟ್ರಕ್​ನಲ್ಲಿ ಅಡಗಿ ಪ್ರಯಾಣಿಸುತ್ತಿದ್ದ ಯುವಕ; ಊರು ಸ್ವಲ್ಪ ದೂರದಲ್ಲಿದ್ದಾಗ ಟ್ವಿಸ್ಟ್​ ಕೊಟ್ರು ಪೊಲೀಸ್​

    ಶಿಮ್ಲಾ: ಕರೊನಾ ಲಾಕ್​ಡೌನ್​ ಇದ್ದುದರಿಂದ ದೂರದ ಪ್ರಯಾಣಗಳಿಗೆ ನಿರ್ಬಂಧ ಹೇರಲಾಗಿದೆ. ಅನುಮತಿ ಇಲ್ಲದೆ ಯಾರೂ ಸಂಚಾರ ಮಾಡುವಂತಿಲ್ಲ.

    ಆದರೆ ಈ ಮಧ್ಯೆ ಒಂದಷ್ಟು ಜನರು ಕದ್ದು ಮುಚ್ಚಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಲಾರಿಗಳಲ್ಲಿ ಅಡಗಿ ಕುಳಿತು ಪ್ರಯಾಣ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಇದನ್ನೂ ಓದಿ: ಪರ್ಲ್​ ಹಾರ್ಬರ್​, ವರ್ಲ್ಡ್​ ಟ್ರೇಡ್​ ಸೆಂಟರ್​ ಅಟ್ಯಾಕ್​​ಗಳನ್ನು ಮೀರಿಸುತ್ತಿದೆ ಕೊವಿಡ್​-19ರ ದಾಳಿ ಎಂದ್ರು ಟ್ರಂಪ್​

    ಈಗ ಹಿಮಾಚಲಪ್ರದೇಶದಲ್ಲಿ ಒಂದು ಜೋಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಕುಲ್ಲು ಜಿಲ್ಲೆಯ ಯುವಕನೋರ್ವ ರಷ್ಯಾದ ಯುವತಿಯೋರ್ವಳ ಜತೆ ಟ್ರಕ್​ನ ಹಿಂದೆ ಅಡಗಿ ಕುಳಿತು ಶಿಮ್ಲಾಕ್ಕೆ ಹೋಗುತ್ತಿದ್ದ.

    ಇವರಿಬ್ಬರೂ ಕುಲ್ಲು ಜಿಲ್ಲೆಯ ನಿರ್ಮಾಂಡ್​ ಏರಿಯಾದಲ್ಲಿ ಇದ್ದವರು. ಆದರೆ ಯಾವುದೋ ಕೆಲಸದ ನಿಮಿತ್ತ ನೊಯ್ಡಾಕ್ಕೆ ಹೋಗಿ ಅಲ್ಲಿಯೇ ಸಿಕ್ಕಿಬಿದ್ದಿದ್ದರು. ಈಗ ಈ ಟ್ರಕ್​​ನಲ್ಲಿ ಶಿಮ್ಲಾಕ್ಕೆ ಪ್ರವೇಶಿಸಿ, ಅಲ್ಲಿಂದ ಮತ್ತೆ ನಿರ್ಮಾಂಡ್​ಗೆ ಹೋಗಿ, ನಂತರ ಸಂಪ್ರದಾಯಬದ್ಧವಾಗಿ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದರು. ಶೋಘಿ ಬಳಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​

    ಇವರ ಬಳಿ ಯಾವುದೇ ಪಾಸ್ ಇರಲಿಲ್ಲ. ಹಾಗಾಗಿ ವಶಕ್ಕೆ ಪಡೆದಿದ್ದೇವೆ. ಲಾರಿ ಚಾಲಕ, ಕ್ಲೀನರ್ ಸೇರಿ ನಾಲ್ವರ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸದ್ಯ ಯುವಕ, ಲಾರಿ ಚಾಲಕ, ಕ್ಲೀನರ್​​ನನ್ನು ಶೋಘಿಯಲ್ಲಿಯೇ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಯುವತಿಯನ್ನು ದೆಹಲಿಗೆ ಕಳಿಸಿ, ಅಲ್ಲಿ ಕ್ವಾರಂಟೈನ್​ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಮದುವೆ ಕನಸು ಕಂಡಿದ್ದ ಜೋಡಿಯ ಪಾಲಿಗೆ ಪೊಲೀಸರು ಹೀಗೆ ಟ್ವಿಸ್ಟ್​ ಕೊಟ್ಟಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಲಾಕ್​ಡೌನ್​ ನಡುವೆ ಘೋರ ದುರಂತ: ವಿಷಾನಿಲ ಸೋರಿಕೆಯಿಂದ ಮಗು ಸೇರಿ ಐವರು ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts