More

    ಏಷ್ಯಾಡ್ ಸ್ವರ್ಣವನ್ನು ಕರೊನಾ ವಾರಿಯರ್ಸ್‌ಗೆ ಅರ್ಪಿಸಿದ ಹಿಮಾ ದಾಸ್

    ನವದೆಹಲಿ: ಭಾರತದ ಮಿಶ್ರ ರಿಲೇ ತಂಡ 2018ರ ಏಷ್ಯನ್ ಗೇಮ್ಸ್‌ನಲ್ಲಿ ಜಯಿಸಿದ್ದ ರಜತ ಪದಕ ಇತ್ತೀಚೆಗೆ ಸ್ವರ್ಣ ಪದಕವಾಗಿ ಬಡ್ತಿ ಪಡೆದಿತ್ತು. ಈ ಸ್ವರ್ಣ ವಿಜೇತ ತಂಡದ ಭಾಗವಾಗಿದ್ದ ಅಥ್ಲೀಟ್ ಹಿಮಾ ದಾಸ್, ಈ ಪದಕವನ್ನು ಈಗ ಕರೊನಾ ವಾರಿಯರ್ಸ್‌ಗೆ ಅರ್ಪಿಸಿದ್ದಾರೆ.

    ‘2018ರ ಏಷ್ಯನ್ ಗೇಮ್ಸ್‌ನ 4/400 ಮೀಟರ್ ಮಿಶ್ರ ರಿಲೇ ತಂಡ ಸ್ಪರ್ಧೆಯಲ್ಲಿ ಮೇಲ್ದರ್ಜೆಗೇರಿದ ನಮ್ಮ ತಂಡದ ಪದಕವನ್ನು ನಾನು ಪೊಲೀಸರು, ವೈದ್ಯರು ಮತ್ತು ಈ ಕಠಿಣ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇತರ ಕರೊನಾ ವಾರಿಯರ್ಸ್‌ಗೆ ಅರ್ಪಿಸಲು ಬಯಸುತ್ತೇನೆ. ಎಲ್ಲ ಕರೊನಾ ವಾರಿಯರ್ಸ್‌ಗೆ ಈ ಗೌರವ’ ಎಂದು 20 ವರ್ಷದ ಹಿಮಾ ದಾಸ್ ಟ್ವೀಟ್ ಮಾಡಿದ್ದಾರೆ. ಧಿಂಗ್ ಎಕ್ಸ್‌ಪ್ರೆಸ್ ಎಂಬ ಅನ್ವರ್ಥನಾಮ ಹೊಂದಿರುವ ಅಸ್ಸಾಂ ಅಥ್ಲೀಟ್ ಹಿಮಾ ದಾಸ್, 20 ವಯೋಮಿತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಓಟಗಾರ್ತಿಯಾಗಿದ್ದಾರೆ.

    ಇದನ್ನೂ ಓದಿ: ಆಸೀಸ್ ಮಹಿಳಾ ಕ್ರಿಕೆಟರ್ ಎಲ್ಲಿಸ್ ಪೆರ್ರಿ ವಿಚ್ಛೇದನ, ಕ್ರೀಡಾ ದಂಪತಿ ಬಾಳಲ್ಲಿ ಬಿರುಕು!

    ಸ್ವರ್ಣ ಪದಕ ಜಯಿಸಿದ ಬಹರೇನ್‌ನ ಓಟಗಾರ್ತಿಯೊಬ್ಬರು ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಕಾರಣ ಭಾರತ ತಂಡ ಜಕಾರ್ತ ಏಷ್ಯಾಡ್‌ನಲ್ಲಿ ಜಯಿಸಿದ್ದ ರಜತ ಪದಕಕ್ಕೆ ಇತ್ತೀಚೆಗೆ ಸ್ವರ್ಣ ಪದಕದ ಪ್ರಗತಿ ಲಭಿಸಿತ್ತು. ಕನ್ನಡತಿ ಎಂಆರ್ ಪೂವಮ್ಮ ಕೂಡ ಈ ರಿಲೇ ತಂಡದ ಭಾಗವಾಗಿದ್ದರು. ಇದರಿಂದ ಕೂಟದಲ್ಲಿ ಭಾರತ ಜಯಿಸಿದ ಒಟ್ಟು ಸ್ವರ್ಣ ಪದಕಗಳ ಸಂಖ್ಯೆಯೂ 16ಕ್ಕೇರಿದೆ.

    ಕನ್ನಡತಿ ಎಂಆರ್​ ಪೂವಮ್ಮ ಜಯಿಸಿದ್ದ ಏಷ್ಯಾಡ್​ ರಜತಕ್ಕೆ ಈಗ ಸ್ವರ್ಣ ಪದಕದ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts