More

    ಕೊಡಗಿನಲ್ಲಿ ಬೆಟ್ಟಗಳ ಕುಸಿತದ ಆತಂಕ; 80 ಕುಟುಂಬಗಳ 221 ಮಂದಿಯ ಸ್ಥಳಾಂತರ..

    ಕೊಡಗು: ಕೊಡಗಿನಲ್ಲಿ ಭಾರಿ ಭೂಕುಸಿತ-ಪ್ರವಾಹ ಉಂಟಾಗಿ ಅಪಾರ ನಷ್ಟ, ಸಾವು-ನೋವು ಸಂಭವಿಸಿ ಇನ್ನೇನು ನಾಲ್ಕು ವರ್ಷ ಪೂರ್ಣಗೊಳ್ಳುತ್ತಿದೆ. ಅಷ್ಟರಲ್ಲಾಗಲೇ ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಮೇಲಿಂದ ಮೇಲೆ ಭೂಕಂಪ ಸಂಭವಿಸುತ್ತಿದ್ದು, ಇದೀಗ ಬೆಟ್ಟ ಕುಸಿತದ ಆತಂಕವೂ ಎದುರಾಗಿದೆ.

    ಕೊಡಗಿನಲ್ಲಿ ಭಾರಿ ಮಳೆ, ಭೂಕಂಪಗಳ ಜತೆಗೆ ಇದೀಗ ಎರಡು ಬೆಟ್ಟಗಳ ಕುಸಿತದ ಆತಂಕ ಉಂಟಾಗಿದ್ದು, ಆ ಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿದೆ. ಕೊಡಗಿನ ಅಯ್ಯಪ್ಪ ಬೆಟ್ಟ ಮತ್ತು ಮಲೆತಿರಿಕೆ ಬೆಟ್ಟ ಕುಸಿಯುವ ಲಕ್ಷಣಗಳು ಗೋಚರಿಸಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ.

    ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟಗಳ 80 ಕುಟುಂಬಗಳ 221 ಮಂದಿಯನ್ನು ಅವರ ವಾಸಸ್ಥಾನಗಳಿಂದ ತೆರವುಗೊಳಿಸಲಾಗಿದ್ದು, ಅವರನ್ನು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಆಶ್ರಯ ನೀಡಲಾಗಿದೆ.

    ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

    ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲಾ ಬಸ್​ ಪಲ್ಟಿ; ಚಾಲಕನ ನಿರ್ಲಕ್ಷ್ಯ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts