More

    ಗುಡ್ಡ ಕುಸಿತ ಹಾನಿ ಪ್ರದೇಶ ಪರಿಶೀಲನೆ

    ಭಟ್ಕಳ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಗುಡ್ಡ ಕುಸಿದು ಹಾನಿಯಾದ ಪ್ರದೇಶಗಳಿಗೆ ಕೇಂದ್ರ ಭೂ ವಿಜ್ಞಾನ ಇಲಾಖೆಯ ಅಹ್ಮದ್ ಅಜಾಜ್ ಮತ್ತು ಕುಮಾರ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ತಾಲೂಕಿನ ಮುಟ್ಟಳ್ಳಿಯಲ್ಲಿ ಆ. 2ರಂದು ಸುರಿದ ಮಳೆಗೆ ಧರೆ ಕುಸಿದು ಮನೆಯೊಂದು ನೆಲಸಮವಾಗಿತ್ತು. ಅದರೊಳಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದರು. ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕೇಂದ್ರ ತಂಡದಿಂದ ಅಗತ್ಯ ಪರೀಶೀಲನೆ ನಡೆಸುತ್ತೇನೆ ಎಂದಿದ್ದರು. ಶುಕ್ರವಾರದಿಂದಲೇ ಜಿಲ್ಲೆಗೆ ಆಗಮಿಸಿದ ತಂಡ ವಿವಿಧೆಡೆ ಭೇಟಿ ಪರಿಶೀಲನೆ ನಡೆಸಿತ್ತು. ಶನಿವಾರ ಮನೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮಣ್ಣು, ಸಾಂಧ್ರತೆ ಕುರಿತು ತಪಾಸಣೆ ನಡೆಸಿತು.

    ಗುಡ ್ಡೊರೆತವನ್ನು 90 ಡಿಗ್ರಿಗೆ ಮಾಡಬಾರದು ಅವಶ್ಯವಿದ್ದರೆ 45 ಡಿಗ್ರಿಯಲ್ಲಿ ಮಾಡಬೇಕಿದೆ. ಆದಷ್ಟು ಸೀಟ್​ಗಳನ್ನು ಹಾಕಬೇಕು ಎಂದು ಸಲಹೆ ನೀಡಿದರು. ಮುಟ್ಟಳ್ಳಿಯಲ್ಲಿ ಇನ್ನೂ ಅಪಾಯ ತಗ್ಗಿಲ್ಲ. ವಿಪರೀತ ಮಳೆ ಬಂದರೆ ಮತ್ತೆ ಕುಸಿತದ ಭೀತಿ ಇದೆ. ಹಾಗಾಗಿ ಅಲ್ಲಿನ ಸುತ್ತಮುತ್ತಲಿನ ಸ್ಥಳದಲ್ಲಿ ಯಾರೂ ವಾಸಿಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ

    ಕಂದಕ ನಿರ್ಮಾಣ ಸ್ಥಳಕ್ಕೂ ಭೇಟಿ: ಕಂದಕ ನಿರ್ಮಾಣ ಹಾಗೂ ಸಮೀಪದ ತೋಟವೊಂದರಲ್ಲಿ ನೀರು ಭೂಮಿಯಿಂದ ಚಿಮ್ಮಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ ತಂಡದ ಸದಸ್ಯರು, ಪ್ರದೇಶದ ಆಳದಲ್ಲಿ ನೈಸರ್ಗಿಕ ನೀರು ಹರಿವಿನ ದಾರಿ (ನ್ಯಾಚುರಲ್ ಡ್ರೈನೇಜ್) ಇರುವ ಸಾಧ್ಯತೆ ಇದ್ದು, ಯಾವುದೇ ಹಾನಿ ಸಂಭವಿಸದೇ ಕಂದಕ ಸೃಷ್ಟಿಯಾಗಿದೆ. ಕಂದಕ ನಿರ್ವಣವಾದ ಪ್ರದೇಶದಲ್ಲಿ ಅಷ್ಟೇ ದಪ್ಪವಾದ ಬೇರು ಇರುವ ಮರವನ್ನು ತಂದು ನೆಡಬೇಕು ಎಂದು ಸಲಹೆ ನೀಡಿದ್ದಾರೆ.

    ತಾಲೂಕಿನ ವಿವಿಧೆಡೆ ಭೂ ಕುಸಿತ ಸ್ಥಳಕ್ಕೆ ಕೇಂದ್ರ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನ ನಡೆಸುತ್ತಿದೆ. ಈ ಕುರಿತು ವಿಜ್ಞಾನಿಗಳ ವರದಿಯನ್ನು ಎದುರು ನೋಡುತ್ತಿದ್ದೇವೆ. ಅಗತ್ಯ ಬಿದ್ದರೆ ಹೆಚ್ಚಿನ ಅಧ್ಯಯನಕ್ಕೆ ತಂಡ ಕರೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಅವರ ನಿರ್ದೇಶನದನ್ವಯ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

    | ಮಮತಾದೇವಿ ಎಸ್., ಭಟ್ಕಳ ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts