More

    ಹೈನುಗಾರರಿಗೆ ಹಾಲು ಖರೀದಿ ದರ ಹೆಚ್ಚಳ: 3 ರೂ. ಪರಿಷ್ಕೃತ ದರ ನೀಡಲು ಬಮೂಲ್ ನಿರ್ಧಾರ

    ಬೆಂಗಳೂರು: ನಂದಿನಿ ಹಾಲು ಹಾಗೂ ಮೊಸರಿನ ಮಾರಾಟ ದರವನ್ನು ಪ್ರತೀ ಲೀಟರ್‌ಗೆ 3 ರೂ. ಹೆಚ್ಚಿಸಿದ ಬೆನ್ನಲ್ಲೇ, ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಹೈನುಗಾರರಿಂದ ಖರೀದಿಸುವ ಹಾಲಿಗೆ 3 ರೂ. ನೀಡುವ ನಿರ್ಧಾರವನ್ನು ಕೈಗೊಂಡಿದೆ.
    ಕೆಎಂಎಫ್​ ಹಾಲಿನ ದರ ಹೆಚ್ಚಿಸಿದ ವೇಳೆ ಮುಖ್ಯಮಂತ್ರಿಯವರು ಲಾಭದ ಹಣವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದರು. ಇದರನ್ವಯ ಬಮೂಲ್ ಆಡಳಿತ ಮಂಡಳಿ ಹಾಲು ಮಾರಾಟದಿಂದ ಬರುವ ಅಷ್ಟೂ ಹಣವನ್ನು ಹೈನುಗಾರರಿಗೆ ವಿತರಿಸಲಿದೆ. ಪರಿಷ್ಕೃತ ದರ ಆ.1ರಿಂದಲೇ ಪೂರ್ವಾನ್ವಯವಾಗುವಂತೆ ನಿಲುವು ಕೈಗೊಂಡಿದೆ.

    ಪ್ರಸ್ತುತ ಬಮುಲ್ ಹಾಲು ಉತ್ಪಾದಕರಿಂದ ಪ್ರತೀ ಲೀಟರ್ ಹಾಲನ್ನು 31.15 ರೂ. ನಂತೆ ಖರೀದಿಸುತ್ತಿತ್ತು. ಈಗ ಈ ಮೊತ್ತ 34.15 ರೂ.ಗೆ (ಹಾಲಿನ ಕನಿಷ್ಠ ಗುಣಮಟ್ಟ 4.0 ಫ್ಯಾಟ್‌ಗೆ) ಏರಿಕೆಯಾಗಿದೆ. ಇದರ ಹೊರತಾಗಿ ಒಕ್ಕೂಟದಿಂದ ಸಂಘಗಳಿಗೆ ಪಾವತಿಸುವ ದರ ಪ್ರತೀ ಕೆ.ಜಿ.ಗೆ 35.90 ರೂ. ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಪ್ರತೀ ಲೀಟರ್‌ಗೆ ಸಂಘದ ಸಿಬ್ಬಂದಿಗಳಿಗೆ ಗುಣಮಟ್ಟದ ಪ್ರೋತ್ಸಾಹಧನ 40 ಪೈಸೆ, ಸಿಬ್ಬಂದಿ ವಯೋನಿವೃತ್ತಿ-ಮರಣ ಪರಿಹಾರಕ್ಕೆ 10 ಪೈಸೆ, ಸಂಘದ ನಿರ್ವಹಣೆಗೆ 1 ರೂ. ಹಾಗೂ ಬಮೂಲ್ ರೈತ ಕಲ್ಯಾಣ ಟ್ರಸ್ಟ್ ಸೌಲಭ್ಯಕ್ಕೆ 25 ಪೈಸೆ ಒಳಗೊಂಡಿರುತ್ತದೆ ಎಂದು ಬಮೂಲ್ ಸ್ಪಷ್ಟಪಡಿಸಿದೆ.

    ಜಿಡ್ಡಿನಾಂಶ ಆಧರಿಸಿ ಹೆಚ್ಚುವರಿ ದರ ನಿಗದಿ:
    ರಾಷನಲೈಸ್ಡ್ ದರ ಪಟ್ಟಿಯಂತೆ ಹಾಲಿನ ಗುಣಮಟ್ಟ ಶೇ. 4.0 ಹಾಗೂ ಮೇಲ್ಪಟ್ಟ ಪ್ರತಿ 0.1 ಜಿಡ್ಡಿನಾಂಶ ಹಾಗೂ ಎಸ್‌ಎನ್‌ಎ್ ಶೇ. 8.5 ಮೇಲ್ಪಟ್ಟ ಪ್ರತಿ 0.1 ಎಸ್‌ಎನ್‌ಎಫ್​​ ತಲಾ 23 ಪೈಸೆ ಹೆಚ್ಚುವರಿ ದರ ನೀಡಲಾಗುತ್ತದೆ. ಅಲ್ಲದೆ ಕನಿಷ್ಠ ಎಸ್‌ಎನ್‌ಎಫ್​​ ಶೇ. 8.5 ಜಿಡ್ಡಿನಾಂಶ ಶೇ. 3.9ರಿಂದ ಶೇ. 3.5ರ ವರೆಗಿನ ಪ್ರತಿ ಶೇ.0.1 ಜಿಡ್ಡಿನಾಂಶಕ್ಕೆ 23 ಪೈಸೆಯಂತೆ ಕಡಿಮೆ ಪಾವತಿಸಲಾಗುತ್ತದೆ.
    ಹಾಲಿನ ಜಿಡ್ಡಿನ ಅಂಶ ಶೇ.4.1ಕ್ಕಿಂತ ಹೆಚ್ಚಿಗಿದ್ದು, ಎಸ್‌ಎನ್‌ಎಫ್​​ ಅಂಶ ಶೇ.8.40ರಿಂದ ಶೇ.8.48 ವರೆಗೆ ಇರುವ ಪ್ರತಿ ಕೆ.ಜಿ. ಹಾಲಿಗೆ 33.50 ರೂ. ಪಾವತಿಸಲಾಗುತ್ತದೆ (ಪ್ರತಿ ಕೆ.ಜಿ. ಹಾಲಿಗೆ ಪೆನಾಲ್ಟಿ 50 ಪೈಸೆ).

    ಹಾಲು ಉತ್ಪಾದಕರಿಗೆ ನೀಡುವ ಪರಿಷ್ಕೃತ ದರ*
    ಹಾಲಿನ ಗುಣಮಟ್ಟ ಪಾವತಿ ದರ
    ಶೇ.4.0 ಫ್ಯಾಟ್ 34.15 ರೂ.
    ಶೇ.3.9 ಫ್ಯಾಟ್ 33.92 ರೂ.
    ಶೇ.3.8 ಫ್ಯಾಟ್ 33.69 ರೂ.
    ಶೇ.3.7 ಫ್ಯಾಟ್ 33.46 ರೂ.
    ಶೇ.3.6 ಫ್ಯಾಟ್ 33.23 ರೂ.
    ಶೇ.3.5 ಫ್ಯಾಟ್ 33.00 ರೂ.
    * ಪ್ರತೀ ಲೀಟರ್‌ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts