More

    ಮಂಗಳೂರಿನಲ್ಲಿ ಹಿಜಾಬ್ ವಿವಾದ ವಿಚಾರ: ಬೇಕಿದ್ದರೆ ಸುಪ್ರೀಂಕೋರ್ಟ್​ ಹೋಗಿ, ಗೊಂದಲ ಸೃಷ್ಟಿಸಬೇಡಿ ಅಂದ್ರು ಕೇಂದ್ರ ಸಚಿವರು

    ಧಾರವಾಡ: ಹಿಜಾಬ್ ವಿಷಯ ಈಗ ಅಪ್ರಸ್ತುತ ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ್ದು ಆಗಿದೆ. ಕೋರ್ಟ್​ ತೀರ್ಪು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಇದರಲ್ಲಿ ಸರ್ಕಾರ, ಪೊಲೀಸರು, ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋರ್ಟ್ ತೀರ್ಮಾನ ಆಗಿದೆ. ಬೇಕಿದ್ದರೆ ಸುಪ್ರಿಂಕೋರ್ಟ್‌ನಲ್ಲಿ ಹೋರಾಡಬಹುದು ಎಂದು ಹೇಳಿದರು.

    ಈಗಾಗಲೇ ಹೈಕೋರ್ಟ್​ ಆದೇಶ ನೀಡಿದೆ. ಅದನ್ನು ಪಾಲನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿರುವ ಅವರು, ದೇಶದ ಸಂವಿಧಾನಕ್ಕೆ ಬದ್ಧತೆ ಇಲ್ಲವಾ ಎಂದಿದ್ದಾರೆ.

    ಈ ರೀತಿಯಲ್ಲಿ ಕಾನೂನು, ಕೋರ್ಟ್, ಸಂವಿಧಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ಹೀಗೆ ನಡೆದುಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದೆಲ್ಲ ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದರು.

    ಇದೇ ವೇಳೆ ಡಿಕೆ ಶಿವಕುಮಾರ್​ ವಿರುದ್ ಇಡಿ ಚಾರ್ಜ್​ಶೀಟ್​ ಕುರಿತು ಪ್ರತಿಕ್ರಿಯಿಸಿದ ಅವರು, ತನಿಖೆಗೆ ನೊಟೀಸ್​ ಕೊಟ್ಟಿರಬಹುದು. ಇದರಲ್ಲಿ ಅಂತಹ ವಿಶೇಷತೆ ಇದೆ ಅನಿಸುವುದಿಲ್ಲ. ಎಫ್ಐಆರ್ ಆದ ಮೇಲೆ ತನಿಖೆ ನಡೆಯುತ್ತಿತ್ತು, ಹೀಗಾಗಿ ನೊಟೀಸ್​ ನೀಡಿರಬಹುದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ರಾಮಾಯಣದ ಸ್ಥಳಗಳಿಗೆ ನೀವೊಮ್ಮೆ ಸುತ್ತಿಬನ್ನಿ, 18 ದಿನಗಳಲ್ಲಿ ಎಂಟು ಸಾವಿರ ಕಿ.ಮೀ ಸಂಚರಿಸಲಿದೆ ಈ ರೈಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts