More

    ಕಾರ್ಟೂನ್​ನಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಕ್ಕೂ ಹಿಜಾಬ್​ ಕಡ್ಡಾಯ!

    ಟೆಹ್ರಾನ್: ಸಾಮಾಜಿಕವಾಗಿ ಓಡಾಡುವ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಟಿವಿಯ ಕಾರ್ಟೂನ್​ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಗಳಿಗೂ ಹಿಜಾಬ್​ ಕಡ್ಡಾಯ ಎಂದು ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಬಗ್ಗೆ ದೇಶದಲ್ಲಿ ಇದೀಗ ಭಾರೀ ಚರ್ಚೆ ಆರಂಭವಾಗಿದೆ.

    ಕಾರ್ಟೂನ್​ಗಳಲ್ಲಿ ಮಹಿಳಾ ಪಾತ್ರಗಳಿಗೆ ಹಿಜಾಬ್​ ಹಾಕದಿದ್ದರೆ ತೊಂದರೆಯಾಗುತ್ತದೆ. ಆ ಕಾರಣಕ್ಕಾಗಿ ಹಿಜಾಬ್​ ಹಾಕುವುದು ಕಡ್ಡಾಯ ಮಾಡಲಾಗುತ್ತಿದೆ ಎಂದು ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಆದರೆ ಈ ಆದೇಶದಿಂದ ದೇಶದ ಹೆಣ್ಣು ಮಕ್ಕಳು ಕೆರಳಿ ಹಿಜಾಬ್​ ತೊಡುವುದನ್ನೇ ಬಿಟ್ಟು ಬಿಡಬಹುದು ಎಂದು ಅನೇಕ ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿ ಈ ವಿಚಾರ ಸದ್ಯ ಚರ್ಚೆಯಲ್ಲಿದೆ. ಕಾರ್ಟೂನ್​ಗಳಲ್ಲೂ ಹಿಜಾಬ್​ ಅವಶ್ಯಕತೆಯೇನು ಎಂದು ಅನೇಕರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಆದೇಶ ಮುಂದೊಂದು ದಿನ ಸುಪ್ರೀಂ ನಾಯಕನಿಗೆ ಅತ್ಯಂತ ದೊಡ್ಡ ಮುಳ್ಳಾಗಲಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿಎಂಸಿಯ ಮಾಸ್ಕ್​ ಕಲೆಕ್ಷನ್​ 30 ಕೋಟಿ ರೂಪಾಯಿ! ಒಂದೇ ದಿನದಲ್ಲಿ 46 ಲಕ್ಷ ರೂ. ಕಲೆಕ್ಷನ್​!

    ಅತ್ತೆ ಮಾವನ ಜವಾಬ್ದಾರಿ ಅಳಿಯನಿಗೂ ಸೇರಿದ್ದು; ಅಳಿಯನಿಂದಲೂ ಜೀವನಾಂಶ ಪಡೆಯಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts