More

    ಹೆದ್ದಾರಿ ವಾಹನ ಚಾಲಕರ ಆರೋಗ್ಯವೂ ಮುಖ್ಯ

    ಹಿರೇಬಾಗೇವಾಡಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಧಾರವಾಡ ಗಿರಿ ಫೌಂಡೇಷನ್ ಮತ್ತು ಹಿರೇಬಾಗೇ ವಾಡಿ ಟೋಲ್ ಪ್ಲಾಜಾ ಇವರ ಆಶ್ರಯದಲ್ಲಿ ವಾಹನ ಚಾಲಕರಿಗಾಗಿ ಶುಕ್ರವಾರ ನೇತ್ರ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು.\

    ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮ ಅಧಿಕಾರಿ ಡಾ. ಚಾಂದನಿ ಮಾತನಾಡಿ, ವಾಹನ ಚಾಲಕರು ತಿಂಗಳುಗಟ್ಟಲೆ ಮನೆ, ಮಕ್ಕಳನ್ನು ಬಿಟ್ಟು ವಾಹನಗಳೊಂದಿಗೆ ಸಂಚರಿಸುತ್ತಿರುತ್ತಾರೆ. ವೇಳೆಗೆ ಸರಿಯಾಗಿ ಆಸ್ಪತ್ರೆಗೆ ಹೋಗಿ ಆರೋಗ್ಯ ಮತ್ತು ಕಣ್ಣು ತಪಾಸಣೆ ಮಾಡಿಸಿಕೊಳ್ಳಲು ಇವರಿಗೆ ಆಗುವುದಿಲ್ಲ. ಹಗಲು-ರಾತ್ರಿ ವಾಹನ ನಡೆಸಿ ನಿದ್ದೆಗೆಟ್ಟು ಕಣ್ಣು ನಿಸ್ತೇಜವಾಗಿ ದೃಷ್ಟಿ ಕಡಿಮೆಯಾಗಿರುತ್ತದೆ. ಅಂಥ ಚಾಲಕರಿ ಗಾಗಿ ಉಚಿತ ವಾಗಿ ಈ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.

    ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ ಮಾತನಾಡಿ, ವಾಹನ ಚಾಲಕರಿಗಾಗಿ ಆಯೋಜಿಸಿ ರುವ ಶಿಬಿರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ ಶಿಬಿರ ಉದ್ಘಾಟಿಸಿದರು. ಉಪಾಧ್ಯಕ್ಷೆ ನಾಜರಿನಬಾನು ಕರಿದಾವಲ, ಟೋಲ್ ವ್ಯವಸ್ಥಾಪಕ ಸುಂದರ ಮ್ಯಾಗೇರಿ, ನೇತ್ರತಜ್ಞ ಡಾ. ನಿಂಗಪ್ಪ, ಗಿರಿ ಫೌಂಡೇಷನ್ ಅಧ್ಯಕ್ಷ ರಾಜು ಜಿ., ನಿರ್ದೇಶಕ ಪ್ರದೀಪ ಮೇಲಗಡೆ, ಬಸವರಾಜ ತೊಟಗಿ, ಆನಂದಗೌಡ ಪಾಟೀಲ, ಮೊಹಮ್ಮದ್ ಸಯ್ಯದ್ ಸನದಿ, ರವಿ ತೆಂಗಿನಕಾಯಿ ಇತರರು ಇದ್ದರು. ಸಿದ್ದನಗೌಡ ಪಾಟೀಲ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts