More

    ಹೆದ್ದಾರಿ ತಡೆದು ಪ್ರತಿಭಟನೆ

    ಚನ್ನಮ್ಮನ ಕಿತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಳಗಾವಿಗೆ ಆಗಮಿಸುತ್ತಿರುವ ಸುದ್ದಿ ತಿಳಿದ ಕುಲವಳ್ಳಿ ಭಾಗದ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ತಮ್ಮ ಹೆಸರಿಗೆ ದಾಖಲಿಸಬೇಕೆಂದು ಆಗ್ರಹಿಸಿ ಕೆಲಕಾಲ ಇಲ್ಲಿನ ಹೆದ್ದಾರಿ ತಡೆದು ಪ್ರತಿಭಟಸಿದರು.

    ಸ್ಥಳಕ್ಕೆ ಆಗಮಿಸಿ ರೈತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ಖಾಸಗಿ ಮಾಲೀಕರು ಹಾಗೂ ಅರಣ್ಯ ಇಲಾಖೆ ನಡುವೆ ವ್ಯಾಜ್ಯ ನಡೆದು ಕೊನೆಗೆ ಖಾಸಗಿ ಮಾಲೀಕರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದಂತೆ ಒಂದು ವರ್ಷದ ನಂತರ ಖಾಸಗಿ ಮಾಲೀಕರ ಹೆಸರನ್ನು ಪಹಣಿ ಪತ್ರದಲ್ಲಿ ಸೇರಿಸಲಾಗಿದೆ ಎಂದರು.

    ಜಿಲ್ಲಾಧಿಕಾರಿಗಳ ಮಾತಿಗೆ ಒಪ್ಪದ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಪಕ್ಕದಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿ ಪ್ರತಿಭಟನೆ ಮುಂದುವರಿಸಿದರು. ಜತೆಗೆ ಮುಖ್ಯಮಂತ್ರಿಗಳ ಬಳಿ ದೂರು ಹೇಳಿಕೊಂಡು ಸಮಸ್ಯೆ ಪರಿಹಾರಕ್ಕಾಗಿ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ಹಠ ಹಿಡಿದರು. ಕೆಲ ರೈತರು ಮುಖಂಡರು ಬಂದರೆ ಮಾತ್ರ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂಬ ಜಿಲ್ಲಾಧಿಕಾರಿ ಹೇಳಿದರು.

    ರೈತ ಮುಖಂಡರು ಒಪ್ಪಿ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲು ಅಧಿಕಾರಿಗಳೊಂದಿಗೆ ಬೆಳಗಾವಿಗೆ ತೆರಳಿದರು. ಉಳಿದ ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿದ್ದ ಪ್ರತಿಭಟನೆಯನ್ನು ತಹಸೀಲ್ದಾರ್ ಕಚೇರಿಗೆ ಸ್ಥಳಾಂತರಿಸಿ ಮುಂದುವರಿಸಿದರು. ಎಸ್ಪಿ ಡಾ.ಭೀಮಾಶಂಕರ ಗುಳೇದ, ತಹಸೀಲ್ದಾರ್ ರವೀಂದ್ರ ಹಾದಿಮನಿ, ಸಿಪಿಐ ಮಹಾಂತೇಶ ಹೊಸಪೇಟ, ಪಿಎಎಸ್‌ಐ ಪ್ರವೀಣ ಗಂಗೋಳ ಇತರರಿದ್ದರು.

    ಭೇಟಿಗೆ ಅವಕಾಶ ಕಲ್ಪಿಸಲಿಲ್ಲ: ಕುಲವಳ್ಳಿ ಭಾಗದ ರೈತರು ತಮಗಾದ ಅನ್ಯಾಯವನ್ನು ಸಿಎಂ ಗಮನಕ್ಕೆ ತರಲು ಪ್ರಯತ್ನಿಸಿದರಾದರೂ ಜಿಲ್ಲಾಡಳಿತ ಅವಕಾಶ ಕಲ್ಪಿಸದೆ ರೈತರ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿದೆ ಎಂದು ರೈತರು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು. ರೈತ ಮುಖಂಡ ಬಿಷ್ಠಪ್ಪ ಶಿಂಧೆ, ಮಹಾಂತೇಶ ಯಮ್ಮಿ, ನಾಗಪ್ಪ ಅಸಲನ್ನವರ, ಕಾಶಿಂ ನೇಸರಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts