More

    ಇದೇನು ಬನಾನ ರಿಪಬ್ಲಿಕಾ? – ಬಿಜೆಪಿ ಶಾಸಕರು ಗೂಂಡಾಗಳು | ಸಿದ್ದರಾಮಯ್ಯ ಟೀಕಾಪ್ರಹಾರ

    ಬೆಂಗಳೂರು : ವಿಧಾನಪರಿಷತ್​ನಲ್ಲಿ ನಡೆದ ಘಟನೆ ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು ನರೇಂದ್ರಮೋದಿ ಪ್ರಜಾಪ್ರಭುತ್ವ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

    ವಿಧಾನಪರಿಷತ್ ಸಭಾಪತಿಗಳನ್ನು ಅವರ ಕಚೇರಿಯಲ್ಲಿ ಬಲತ್ಕಾರದಿಂದ ಕೂಡಿಹಾಕಿ, ಅವರ ಅನುಮತಿ ಇಲ್ಲದೆ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡಹಗಲೇ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ. ಬಿಜೆಪಿ ಸದಸ್ಯರು ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ನೋಟೀಸ್ ನೀಡಿದ್ದರು. ನಿಯಮಾವಳಿ ಪ್ರಕಾರ ಅದರ ಇತ್ಯರ್ಥಕ್ಕೆ ಹದಿನಾಲ್ಕು ದಿನ ಕಾಲಾವಕಾಶ ಇದೆ. ಆದರೆ ನೊಟೀಸ್ ಕ್ರಮಬದ್ದವಾಗಿಲ್ಲ ಎಂದು ಸಭಾಪತಿಯವರು ತಿರಸ್ಕರಿಸಿದ್ದ ಕಾರಣ ಆ ವಿಷಯ ಇಂದಿನ ಅಜೆಂಡಾದಲ್ಲಿ ಇರಲಿಲ್ಲ.ಅವಿಶ್ವಾಸ ನಿರ್ಣಯ ಅಜೆಂಡಾದಲ್ಲಿ ಸೇರ್ಪಡೆಯಾದ ನಂತರ ಸದನದಲ್ಲಿ ಅದನ್ನು ಕನಿಷ್ಠ ಹತ್ತು ಜನ ಯಾವುದೇ ಚರ್ಚೆ ಇಲ್ಲದೆ ಬೆಂಬಲಿಸಬೇಕು. ಅದರ ಆಧಾರದಲ್ಲಿ ಮುಂದಿನ ಐದು ದಿನಗಳೊಳಗೆ ನಿರ್ಣಯದ ಚರ್ಚೆಗೆ ಸಭಾಪತಿಗಳು ದಿನ ಗೊತ್ತುಪಡಿಸಬೇಕು. ಈ ನಿಯಮ ಪಾಲನೆಯಾಗಿದೆಯೇ? ಎಂದರು.

    ಇದನ್ನೂ ಓದಿ: ಪರಿಷತ್ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ವಿರುದ್ಧ ಜೆಡಿಎಸ್​ನಿಂದಲೂ ಅವಿಶ್ವಾಸ ನಿರ್ಣಯ ಮಂಡನೆ

    ಬಿಜೆಪಿಯವರ ಅವಿಶ್ವಾಸ ನಿರ್ಣಯದ ನೊಟೀಸ್ ಸಭಾಪತಿಯವರಿಂದ ತಿರಸ್ಕೃತಗೊಂಡಿದೆ ಮತ್ತು ಅಜೆಂಡಾದಲ್ಲಿಯೂ ಇರಲಿಲ್ಲ. ಹೀಗಿದ್ದಾಗ ಬಿಜೆಪಿ ಸದಸ್ಯರೇ ಅಜೆಂಡಾವನ್ನು ನಿರ್ಧರಿಸಿ, ತಾವೇ ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿ ತಾವೇ ನಿರ್ಧರಿಸಿದ ಅಜೆಂಡಾ ಮೂಲಕ ಕಲಾಪ ನಡೆಸಲು ಇದೇನು ಬನಾನ ರಿಪಬ್ಲಿಕಾ?. ರಾಜ್ಯದ ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಅವರು ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯವರನ್ನು ಅಕ್ರಮವಾಗಿ ಕೂರಿಸ್ತಾರೆ, ಕಾನೂನು ಸಚಿವ ಮಾಧುಸ್ವಾಮಿ ಅವರು ಸದನದಲ್ಲಿ ಮಾರ್ಷಲ್ ಗಳಿಗೆ ಧಮಕಿ ಹಾಕ್ತಾರೆ. ಇಬ್ಬರೂ ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುತ್ತಾರೆ. ಇವರು ಸಚಿವರಾಗಲು ಅರ್ಹರೇ? ಎಂದು ಟೀಕಿಸಿದರು.

    ಇದನ್ನೂ ಓದಿ: ಗೋಹತ್ಯೆ ನಿಷೇಧಿಸಿದ್ರೆ ಸಮಾಜದಲ್ಲಿ ಅಶಾಂತಿ, ಜನರ ಬಾಳು ಅಲ್ಲೋಲ-ಕಲ್ಲೋಲ: ಎಚ್​.ಡಿ.ದೇವೇಗೌಡ

    ವಿಧಾನಪರಿಷತ್​ನಲ್ಲಿ ಇಂದು ನಡೆದಿರುವ ಘಟನಾವಳಿಗಳು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೂಡಿ ನಡೆಸಿರುವ ಯೋಜಿತ ಷಡ್ಯಂತ್ರ. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಒಳಒಪ್ಪಂದ ಬಯಲಾಗಿದೆ. ಇದಕ್ಕಾಗಿ ಎರಡೂ ಪಕ್ಷಗಳ ನಾಯಕರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ರಾಜ್ಯಪಾಲರು ವಿಧಾನಪರಿಷತ್​ನಲ್ಲಿ ನಡೆದ ಘಟನಾವಳಿಗಳನ್ನು ನಿಷ್ಪಕ್ಷಪಾತನದಿಂದ, ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಪುನಃ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts