More

    ಮದ್ಯದಂಗಡಿಗೆ ಶಿಫಾರಸು ಪತ್ರ ನೀಡಿದ ಮಂತ್ರಿ ಮೇಲೆ ಹೈಕೋರ್ಟ್ ಗರಂ

    ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡುವಂತೆ ಶಿಫಾರಸು ಮಾಡಿ ಎಂಎಸ್‌ಐಎಲ್ಗೆ ಪತ್ರ ಬರೆದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸಚಿವರು ಮಾಡುವ ಕೆಲಸ ಇದಲ್ಲ, ಇದು ಅಧಿಕಾರದ ದುರುಪಯೋಗ ಎಂದು ಕಿಡಿ ಕಾರಿದೆ.

    ವಿಧಾನಸಭಾ ಕ್ಷೇತ್ರವಾರು ಕೋಟಾ ನಿಗದಿಪಡಿಸಿ ಮದ್ಯದಂಗಡಿ ತೆರೆಯಲು ಎಂಎಸ್‌ಐಎಲ್ಗೆ ಲೈಸೆನ್ಸ್ ನೀಡುವ ಸಂಬಂಧ 2016ರಲ್ಲಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಬೀದರ್ ಜಿಲ್ಲೆ ಔರಾದ್ ತಾಲೂಕು ಮುಧೊಳ-ಬಿ ಗ್ರಾಮದ ಸೋಮನಾಥ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

    ಇದನ್ನೂ ಓದಿರಿ ಕಪ್ಪು-ಬಿಳುಪು ಟಿವಿ ಮಾರಾಟ ಮಾಡಿದ್ರೆ ಕೋಟಿ ಹಣ ಸಿಗುತ್ತೆ!

    ಅರ್ಜಿದಾರರ ಪರ ವಕೀಲ ಜಿ.ಕೆ. ಭಟ್, ಸಚಿವರ ಶಿಫಾರಸು ಪತ್ರದ ವಿಚಾರ ಪ್ರಸ್ತಾಪಿಸಿ, ತಮ್ಮ ಮತ ಕ್ಷೇತ್ರದ ಬಾಲಾಜಿ ನಿರುದ್ಯೋಗಿಯಾಗಿದ್ದು, ಜೀವನ ನಿರ್ವಹಣೆಗೆ ಔರಾದ್ ತಾಲೂಕಿನ ಮುಧೋಳ-ಬಿ ಗ್ರಾಮದಲ್ಲಿ ಎಂಎಸ್‌ಐಎಲ್ ಮಳಿಗೆ ತೆರೆಯಲು ಅನುಮತಿ ನೀಡಲು ಮತ್ತು ಈ ಮಳಿಗೆಯಲ್ಲಿ ಸಂತೋಷ ಹಾಗೂ ಸುನೀಲ್ ಎಂಬುವರು ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಆದೇಶ ಹೊರಡಿಸಲು ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ 2019ರ ಡಿ.19ಕ್ಕೆ ಬರೆದ ಪತ್ರವನ್ನು ನ್ಯಾಯಪೀಠಕ್ಕೆ ಹಾಜರುಪಡಿಸಿದರು. ಬಾಲಾಜಿ, ಸಂತೋಷ್ ಹಾಗೂ ಸುನೀಲ್ ಮೂವರು ಸಹೋದರರು ಎಂಬ ವಿಚಾರವನ್ನೂ ನ್ಯಾಯಪೀಠದ ಗಮನಕ್ಕೆ ತಂದರು.

    ಸಚಿವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಸಚಿವರು ಮಾಡುವ ಕೆಲಸ ಇದಲ್ಲ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಇದು ಅಧಿಕಾರದ ದುರುಪಯೋಗವಾಗಿದೆ. ಆದ್ದರಿಂದ, ಅರ್ಜಿಯಲ್ಲಿ ಸಚಿವರನ್ನೂ ಪ್ರತಿವಾದಿಯನ್ನಾಗಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತು. ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಅಬಕಾರಿ ಆಯುಕ್ತರು, ಬೀದರ್ ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಆಯುಕ್ತ, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು. 22ಕ್ಕೆ ಮುಂದೂಡಿತು.

    ಅರ್ಜಿದಾರರ ಮನವಿ ಏನು?: ಹೊಸದಾಗಿ 900 ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಸಂಬಂಧ 2016ರ ಸೆ.23ರಂದು ಆರ್ಥಿಕ ಇಲಾಖೆ ಹೊರಡಿಸಿದ ಆದೇಶ, ಇದಕ್ಕೆ ಪೂರಕವಾಗಿ ಅ.6ರಂದು ಅಬಕಾರಿ ಆಯುಕ್ತರು ಹೊರಡಿಸಿದ ಸುತ್ತೋಲೆ ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣ ನಿಷೇಧಿಸಿದ್ದರ ಕುರಿತು ಹೈಕೋರ್ಟ್ ನಿಲುವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts