More

    ಸಲಿಂಗಿ ಜೋಡಿಗೆ ಗುಡ್​ ನ್ಯೂಸ್​ ಕೊಟ್ಟ ಹೈಕೋರ್ಟ್…

    ಮಹತ್ವದ ಬೆಳವಣಿಗೆಯೊಂದರಲ್ಲಿ ಒಡಿಶಾ ಹೈಕೋರ್ಟ್​ ಸಲಿಂಗಿ ಜೋಡಿಗೆ ಒಟ್ಟಿಗೇ ಜೀವನ ನಡೆಸಲು ಅನುಮತಿ ನೀಡಿದೆ.
    ಲಿಂಗಭೇದವಿಲ್ಲದೆ ಎಲ್ಲ ಮನುಷ್ಯರೂ ಸಂಪೂರ್ಣವಾಗಿ ಆನಂದ, ಸಂತೋಷವಾಗಿರುವ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೈಕೋರ್ಟ್​ನ ಎಸ್​.ಕೆ.ಮಿಶ್ರಾ ಮತ್ತು ಸಾವಿತ್ರಿ ರಾಥೋ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಈ ಸಲಿಂಗಿ ಜೋಡಿಯಲ್ಲಿ ಲಿಂಗ ಪರಿವರ್ತಿತ 24 ವರ್ಷದ ಯುವಕ ಕಳೆದ ವಾರ ಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿ, ತಮಗಿಬ್ಬರಿಗೂ ಒಂದಾಗಿ ಜೀವನ ನಡೆಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದ. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಒಂದಾಗಿ ಜೀವನ ನಡೆಸುತ್ತೇವೆ. ನಮಗೆ ಎಲ್ಲ ರೀತಿಯ ರಕ್ಷಣೆ ಬೇಕು. ಜೀವಿಸುವ, ಸಮಾನತೆ, ಕಾನೂನು ರಕ್ಷಣೆಯ ಹಕ್ಕುಗಳನ್ನು ಹೊಂದಿ ನಾವು ಜೀವನ ನಡೆಸುವಂತಾಗಬೇಕು ಎಂದು ಮನವಿ ಮಾಡಿದ್ದ. ಇದನ್ನೂ ಓದಿ: ತನ್ನ ಎರಡೂ ಕಿವಿಯನ್ನು ಕತ್ತರಿಸಿ, ಭದ್ರವಾಗಿ ಜಾರ್​​ನಲ್ಲಿ ಇಟ್ಟವನ ತಲೆಬುರುಡೆ ನೋಡಿ…!

    ಸಲಿಂಗಿ ಜೋಡಿಯಲ್ಲಿ ತಾನು ಗಂಡ ಎಂದು ಹೇಳಿಕೊಂಡಿರುವ ಈ ಯುವಕ, ನನ್ನ ಸಂಗಾತಿಯನ್ನು ಅಂಕಲ್​ ಮತ್ತು ಅವರ ತಾಯಿ ಸೇರಿಕೊಂಡು ಬಲವಂತವಾಗಿ ಜೈಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ಕೋರ್ಟ್​ ಮೆಟ್ಟಿಲೇರಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.

    ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ಕೆ.ಮಿಶ್ರಾ ನೇತೃತ್ವದ ಪೀಠ, ಇದೀಗ ಇಬ್ಬರನ್ನೂ ಒಟ್ಟಾಗಿ ಜೀವಿಸಲು ಬಿಡಬೇಕು. ಅವರ ನಿರ್ಧಾರವನ್ನು ಸಮಾಜ ಸ್ವಾಗತಿಸಿ, ಬೆಂಬಲಿಸಬೇಕು. ಈ ಸಲಿಂಗಿ ಜೋಡಿಗಳು ಸಂತೋಷದಿಂದ, ಸಾಮರಸ್ಯದಿಂದ ಜೀವನ ನಡೆಸಬೇಕು ಎಂಬುದು ಕೋರ್ಟ್​ನ ಆಶಯ ಎಂದು ಹೇಳಿದೆ. (ಏಜೆನ್ಸೀಸ್)

    ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts