More

    ಹೆಸ್ಕಾಂ ಎಇಇ ಶರತಚಂದ್ರ ಜಿಂಗಾಡೆಗೆ ಸನ್ಮಾನ

    ಸವಣೂರ: ಸಾಮಾಜಿಕ ಚಿಂತನೆಯುಳ್ಳ ಸಮಾಜದ ವ್ಯಕ್ತಿ ಉನ್ನತ ಸ್ಥಾನ ಅಲಂಕರಿಸಿರುವ ಸಂದರ್ಭದಲ್ಲಿ ಯುವಜನತೆಗೆ ಪರಿಚಯಿಸಿ, ಸಾಧನೆಗೆ ಪ್ರೋತ್ಸಾಹಿಸುವುದು ಅವಶ್ಯವಾಗಿದೆ ಎಂದು ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ(ಎಬಿಬಿಕೆ)ದ ತಾಲೂಕು ಅಧ್ಯಕ್ಷ ಖಂಡೋಬಾ ಗೋಪಾಲರಾವ್ ರಾಶಿನಕರ ಹೇಳಿದರು.

    ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ಹಾಗೂ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಎಇಇ ಶರತಚಂದ್ರ ಜಿಂಗಾಡೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

    ಮಾಜಿ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಹೆಸ್ಕಾಂ ಹಾವೇರಿ ವಿಭಾಗ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಶರತಚಂದ್ರ ಜಿಂಗಾಡೆ ಅಧಿಕಾರ ವಹಿಸಿಕೊಂಡಿರುವುದು ಸಂತಸ ತಂದಿದೆ. ಭಾವಸಾರ ಕ್ಷತ್ರಿಯ ಬಡಕುಟುಂಬಗಳ ಯುವಜನತೆಗೆ ಎಇಇ ಶರತಚಂದ್ರ ಜಿಂಗಾಡೆ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ ಎಂದರು.

    ನೂತನ ಎಇಇ ಶರತಚಂದ್ರ ಜಿಂಗಾಡೆ ಅಧಿಕಾರ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಎಬಿಬಿಕೆ ಮಾಜಿ ಜಿಲ್ಲಾ ಅಧ್ಯಕ್ಷ ಉಮೇಶ ದಾಮೋದರ, ಪಂಚಕಮಿಟಿ ಪದಾಧಿಕಾರಿಗಳಾದ ಅರುಣ ಬಗರೆ, ನಾಗೇಶ ಗಿತ್ತೆ, ಕೃಷ್ಣ ಹಂಚಾಟೆ, ಪುಂಡಲೀಕ ಮಹೇಂದ್ರಕರ, ನಾರಾಯಣ ಹಂಚಾಟೆ, ಟ್ರಸ್ಟ್ ಕಮಿಟಿ ಪದಾಧಿಕಾರಿಗಳಾದ ಪಾಂಡುರಂಗ ಮಹೇಂದ್ರಕರ, ರಾಜು ಮಹೇಂದ್ರಕರ, ಮುರಳೀಧರ ಶೇಂಡಿಗೆ, ಪರಶುರಾಮ ಅಚಲಕರ, ದತ್ತಾತ್ರೇಯ ಬಗರೆ, ಮಾರುತಿ ಅಚಲಕರ, ಮಂಜುನಾಥ ಬಗರೆ, ಮಂಜುನಾಥ ಗಿತ್ತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts