More

    ಬಾಲಕಿಯನ್ನು ರೇಪ್​ ಮಾಡಿದ ಆರೋಪಿ ಹಿಡಿಯಲು 13ನೇ ಮಹಡಿಯಿಂದ ಜಿಗಿದ ಪೊಲೀಸ್: ಮುಂದೇನಾಯ್ತು?

    ನೂರ್​ ಸುಲ್ತಾನ್​: ತಪ್ಪಿಸಿಕೊಂಡು ಓಡುತ್ತಿದ್ದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪಿಯನ್ನು ಹಿಡಿಯಲು 13ನೇ ಮಹಡಿಯ ಕಿಟಕಿಯಿಂದ ಜಿಗಿಯುವ ಮೂಲಕ ಕಝಾಕಿಸ್ತಾನದ ಪೊಲೀಸ್​ ಅಧಿಕಾರಿಯೊಬ್ಬರು ಹೀರೋ ಆಗಿ ಹೊರಹೊಮ್ಮಿದ್ದಾರೆ.

    ಕಝಾಕಿಸ್ತಾನದ ಬಹುದೊಡ್ಡ ನಗರದ ಬೃಹತ್​ ಅಪಾರ್ಟ್​ಮೆಂಟ್​ ಒಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸ್​ ಅಧಿಕಾರಿಗಳಾದ ಬಕಿಟ್ಝಾನ್​ ಬಕಿರೊವ್​ (36) ಮತ್ತು ಮೆಯಿರ್​ ನೆಸಿಪ್​ಬೇ ಸ್ಥಳಕ್ಕೆ ಧಾವಿಸಿದ್ದರು.

    ಇದನ್ನೂ ಓದಿ: ಕರುನಾಡು ಕಂಪ್ಲೀಟ್ ಫ್ರೀ, ರಾಜ್ಯದಲ್ಲಿ ಇನ್ಮುಂದೆ ಎಲ್ಲೂ ಕೂಡ ಲಾಕ್​ಡೌನ್​ ಇರಲ್ಲ: ಸಿಎಂ ಬಿಎಸ್​ವೈ

    ಪೊಲೀಸ್​ ಅಧಿಕಾರಿಗಳು ಬರುತ್ತಿದ್ದಂತೆ ಆರೋಪಿ ಕಿಟಕಿಯಿಂದ ಹೊರಕ್ಕೆ ಧುಮುಕಿ ಓಡಲು ಶುರು ಮಾಡಿದ್ದಾನೆ. ಇದನ್ನು ಕಂಡ ಕ್ಷಣದಲ್ಲೇ ಬಕಿರೋವ್​ ಸಹ ಕಟ್ಟಡದ 13ನೇ ಮಹಡಿಯ ಕಿಟಕಿಯಿಂದ ಹೊರಕ್ಕೆ ಹಾರಿದ್ದಾರೆ. ಅದೃಷ್ಟವಶಾತ್​ ತಾವು ಹಾರಿದ ಎರಡು ಮಹಡಿ ಕೆಳಗಿದ್ದ ಬಾಲ್ಕನಿಯಲ್ಲಿ ಇಬ್ಬರು ಲ್ಯಾಂಡ್​ ಆಗಿದ್ದಾರೆ. ಜಿಗಿದಿದ್ದರಿಂದ ಕಾಲು ಸ್ವಲ್ಪ ಮುರಿದರೂ ಸಹ ಆರೋಪಿಯನ್ನು ಹಿಡಿಯುವಲ್ಲಿ ಬಕಿರೋವ್​ ಯಶಸ್ವಿಯಾಗಿದ್ದಾರೆ.

    ಪೊಲೀಸ್​ ಅಧಿಕಾರಿಯ ಧೈರ್ಯ ಹಾಗೂ ಕರ್ತವ್ಯ ನಿಷ್ಠೆಯನ್ನು ನಾವಿಲ್ಲಿ ಮೆಚ್ಚಲೇಬೇಕಿದೆ. ಅಲ್ಲದೆ, ಶೌರ್ಯ ಪದಕದ ಗೌರವವನ್ನು ಬಕಿರೋವ್ ಸ್ವೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ದಿಟ್ಟತನಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

    ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಸಂತ್ರಸ್ತ ಬಾಲಕಿಯ ನಾಲ್ಕ ವರ್ಷದ ಸಹೋದರನನ್ನು ಎದುರಿಸಿ ಮನೆಯಲ್ಲಿನ 13,000 ಪೌಂಡ್​ (12,31,310 ರೂ.) ಹಣವನ್ನು ಕದ್ದಿದ್ದಾನೆ. ಇದೀಗ ಬಂಧಿಯಾಗಿರುವ ಆರೋಪಿ ಮೇಲಿನ ಆರೋಪ ಸಾಬೀತಾದರೆ ಕಝಾಕಿಸ್ತಾನದ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾನೆ.

    ಇದನ್ನೂ ಓದಿ: ಲಿಫ್ಟ್​ನಲ್ಲಿ ಸಿಲುಕಿ ಮೂತ್ರ ಕುಡಿದೇ 3 ದಿನ ವನವಾಸ ಅನುಭವಿಸಿದ ಅಮ್ಮ-ಮಗಳಿಗೆ 4ನೇ ದಿನ ಕಾದಿತ್ತು ಅಚ್ಚರಿ!

    ಇನ್ನು ಪ್ರಕರಣ ಬಗ್ಗೆ ಮಾತನಾಡಿರುವ ಬಕಿರೋವ್​ ಏನಾದರೂ ಸರಿ ಆರೋಪಿಯನ್ನು ಹಿಡಿಯುವುದು ಮಾತ್ರ ನನ್ನ ಗುರಿಯಾಗಿತ್ತು. ನನಗೆ ಗೊತ್ತಿಲ್ಲದೇ ಕಟ್ಟಡದಿಂದ ಕೆಳಗೆ ಹಾರಿದೆ. ಆ ಬಳಿಕವೂ ನನಗೆ ಯಾವುದೇ ಭಯವಾಗಲಿಲ್ಲ. ಅಲ್ಲದೆ, ಕಟ್ಟಡದ ಎರಡು ಮಹಡಿಯ ಕೆಳಗೆ ಬಾಲ್ಕನಿ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದ್ಯಾವುದನ್ನೂ ನಾನು ಯೋಚಿಸಲಿಲ್ಲ. ಕ್ರಿಮಿನಲ್​ ಹಿಡಿಯುವುದೇ ನನ್ನ ಮುಖ್ಯ ಗುರಿಯಾಗಿತ್ತು ಎನ್ನುತ್ತಾರೆ ಬಕಿರೋವ್​. (ಏಜೆನ್ಸೀಸ್​)

    ಸಿಲಿಕಾನ್ ಸಿಟಿಯಿಂದ ದೂರವಿದ್ದು ಕೃಷಿಯಲ್ಲೇ ಖುಷಿ ಕಾಣುತ್ತಿರುವ ಕರಾವಳಿ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts