More

    ಬಲು ರುಚಿ ಈ ‘ನ್ಯೂಡಲ್ಸ್​ ದೋಸಾ…’ಟ್ರೈ ಮಾಡಿ ನೋಡಿ..ಮಕ್ಕಳಿಗೂ ಕೊಡಿ

    ನ್ಯೂಡಲ್ಸ್​…ಯಾರಿಗೆ ಇಷ್ಟವಿಲ್ಲ ಹೇಳಿ. ಪಟಾಪಟ್​ ಅಂತ ರೆಡಿ ಆಗೋ ತಿಂಡಿ ಇದು. ಅದರಲ್ಲೂ ಮಕ್ಕಳಂತೂ ನ್ಯೂಡಲ್ಸ್​ನ್ನು ತುಂಬ ಇಷ್ಟಪಟ್ಟು ತಿನ್ನುತ್ತಾರೆ.

    ನ್ಯೂಡಲ್ಸ್​ನಿಂದಲೂ ಕೂಡ ಹೊಸ ಪ್ರಯೋಗ ಮಾಡಬಹುದು. ಇದರಿಂದ ವಿವಿಧ ತಿನಿಸುಗಳನ್ನು ತಯಾರಿಸಬಹುದು. ನಿಮಗೆ ಗೊತ್ತಾ..ಸನ್​ಫೀಸ್ಟ್​ ಯಿಪ್ಪೀ ನ್ಯೂಡಲ್ಸ್​ನಿಂದ ದೋಸೆಯನ್ನೂ ಮಾಡಬಹುದು. ದೆಹಲಿಯ ಪ್ರಮುಖ ಬಾಣಸಿಗರೊಬ್ಬರು ಹೇಳಿದ ವಿಭಿನ್ನ ದೋಸೆ ಇದು. ನೀವೂ ಟ್ರೈ ಮಾಡಿ, ನ್ಯೂಡಲ್ಸ್​ ದೋಸೆ ಅತ್ಯಂತ ರುಚಿಯಾಗಿರುತ್ತದೆ. ಬೆಳಗಿನ ಬ್ರೇಕ್​ಪಾಸ್ಟ್​ಗೂ ಮಾಡಬಹುದು…ಸಡನ್​ ಆಗಿ ಮಕ್ಕಳಿಗೆ ರೆಡಿ ಮಾಡಿ ಕೊಡಬಹುದು. 15 ನಿಮಿಷಗಳಲ್ಲಿ ತಯಾರಾಗುತ್ತದೆ ಎಂದು ಚೆಫ್​ ಹೇಳಿದ್ದಾರೆ.

    ನ್ಯೂಡಲ್ಸ್​ ದೋಸಾ

    ಬೇಕಾಗುವ ಸಾಮಗ್ರಿಗಳು: ಒಂದು ಪ್ಯಾಕೇಟ್​ ನ್ಯೂಡಲ್ಸ್​. ನೀರು- 150ml, ತುಪ್ಪ-ಒಂದು ಟೇಬಲ್ ಚಮಚ, ಸಂಸ್ಕರಿಸಿದ ಚೀಸ್​-50 ಗ್ರಾಂ, ದೋಸೆ ಹಿಟ್ಟು (ಮೊದಲೇ ತಯಾರಿಸಿಟ್ಟುಕೊಂಡಿದ್ದು)-250 ಗ್ರಾಂ, ನಿಮಗೆ ಬೇಕಾದಷ್ಟು ಟೊಮ್ಯಾಟೊ, ಪುದಿನಾ, ಕೊತ್ತಂಬರಿ ಸೊಪ್ಪು, ಈರುಳ್ಳಿ (ಇವುಗಳನ್ನೆಲ್ಲ ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಉಪ್ಪು ರುಚಿಗೆ ತಕ್ಕಷ್ಟು.
    ಮಾಡುವ ವಿಧಾನ

    ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ಅದು ಕುದಿಯಲು ಶುರುಮಾಡಿದ ಕೂಡಲೇ ನ್ಯೂಡಲ್ಸ್​ ಮತ್ತು ಅದರ ಮಸಾಲಾ ಹಾಕಿ. ಅದಕ್ಕೆ ತುಪ್ಪವನ್ನು ಸೇರಿ ನ್ಯೂಡಲ್ಸ್​ನ್ನು ಸರಿಯಾಗಿ ಬೇಯಿಸಿ. ಬೆಂದ ಬಳಿಕ ಇನ್ನೊಂದು ಪಾತ್ರೆಗೆ ಹಾಕಿಡಿ. ಇದನ್ನೂ ಓದಿ: ಒಂದು ಲಕ್ಷ ಮರ ನೆಡುವ ಅಭಿಯಾನಕ್ಕೆ ಮೆಗಾಸ್ಟಾರ್ ಚಾಲನೆ…

    ನಂತರ ದೋಸೆ ಹಿಟ್ಟಿಗೆ ಬೇಕಾದಷ್ಟು ಉಪ್ಪು ಹಾಕಿಕೊಳ್ಳಿ. ನಂತರ ತವಾವನ್ನು ಗ್ಯಾಸ್​ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಬಿಸಿಯಾದ ಕಾವಲಿಯ ಮೇಲೆ ಹಿಟ್ಟನ್ನು ಹಾಕಿ. ಹಾಗೇ..ಅದರ ಮೇಲೆ ರೆಡಿ ಮಾಡಿ ಇಟ್ಟುಕೊಂಡ ನ್ಯೂಡಲ್ಸ್​ನ್ನು ಹಾಕಿ. ಅದಾದ ಬಳಿಕ, ಚಿಕ್ಕದಾಗಿ ಕತ್ತರಿಸಿಟ್ಟುಕೊಂಡ ಈರುಳ್ಳಿ, ಟೊಮ್ಯಾಟೊ, ಪುದಿನಾ, ಕೊತ್ತಂಬರಿ ಸೊಪ್ಪುಗಳನ್ನು ಉದುರಿಸಿ. ಚೀಸ್​ ಕೂಡ ಆಗಲೇ ಹಾಕಿ. ನಂತರ ದೋಸೆ ಕ್ರಿಸ್ಪಿ ಆಗುವವರೆಗೆ ಬೇಯಿಸಿ.

    ಈ ದೋಸೆ ತಿನ್ನಲು ತುಂಬ ರುಚಿಯಾಗಿರುತ್ತದೆ. ಬಿಸಿಬಿಸಿಯಾಗಿದ್ದಾಗಲೇ ಯಾವುದೇ ಚಟ್ನಿಯ ಜತೆ ತಿನ್ನಬಹುದು. (ಏಜೆನ್ಸೀಸ್​)

    ವಿಧವೆಯರು..ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದವ ಅರೆಸ್ಟ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts