More

    ಈ ಊರಿನ ಬಹುತೇಕ ಹುಡುಗಿಯರು ಮದ್ವೆ ಆಗುವುದೇ ಇಲ್ಲ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

    ಬ್ರಾಸಿಲಿಯಾ: ಲಿಂಗಾನುಪಾತದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಕಡಿಮೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಭಾರತದಲ್ಲಿ ಹುಡುಗಿಯರ ಕೊರತೆಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ.

    ಹೆಣ್ಣು ಮಗು ಎಂದು ಗೊತ್ತಾಗುತ್ತಿದ್ದಂತೆ ಸಾಕಷ್ಟು ಮಂದಿ ಭ್ರೂಣ ಹತ್ಯೆಯಂತಹ ಪಾಪದ ಕೆಲಸಕ್ಕೆ ಕೈಹಾಕುವುದರಿಂದ ಲಿಂಗಾನುಪಾತದಲ್ಲಿ ತುಂಬಾ ವ್ಯತ್ಯಾಸ ಕಾಣುತ್ತಿದೆ. ಹೀಗಾಗಿ ಬಹುತೇಕ ಕಡೆ ಯುವಕರ ಸಂಖ್ಯೆಯೇ ಹೆಚ್ಚು ಮತ್ತು ಹುಡುಗಿಯರ ಸಂಖ್ಯೆ ತುಂಬಾ ವಿರಳ. ಉದಾಹರಣೆ ನಮ್ಮ ದೇಶದಲ್ಲಿ ಕೇರಳ ಬಿಟ್ಟರೆ, ಉಳಿದ ರಾಜ್ಯಗಳಲ್ಲಿ ಯುವಕರೇ ಮೇಲುಗೈ.

    ಆದರೆ, ಇಲ್ಲೊಂದು ಗ್ರಾಮವಿದೆ. ಇಲ್ಲಿ ಯುವಕರ ಸಂಖ್ಯೆ ತುಂಬಾ ವಿರಳ. ಆದ್ದರಿಂದ ಇಲ್ಲಿನ ಯುವತಿಯರಿಗೆ ಮದುವೆಯಾಗಲು ಹುಡುಗರೇ ಸಿಗುತ್ತಿಲ್ಲ. ಹೀಗಾಗಿ ಇಡೀ ಜೀವನವನ್ನು ಒಂಟಿಯಾಗಿಯೇ ಕಳೆಯುತ್ತಾರೆ.

    ಇದನ್ನೂ ಓದಿರಿ: ಹಾಡಹಗಲೇ ಒಂಟಿ ಮನೆಗೆ ಕನ್ನ: 10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    ಹೌದು, ಆ ಗ್ರಾಮ ಇರುವುದು ಬ್ರೆಜಿಲ್​ನಲ್ಲಿ. ಇಲ್ಲಿನ ಅನೇಕ ಯುವತಿಯರು ಜೀವನದ ಉದ್ದಕ್ಕೂ ಕನ್ಯೆಯರಾಗಿಯೇ ಉಳಿದುಕೊಂಡಿದ್ದಾರೆ. ಏಕೆಂದರೆ ಯುವಕರ ಸಂಖ್ಯೆ ತೀರ ಕಡಿಮೆ. ಅಂದಹಾಗೆ ಈ ಗ್ರಾಮದ ಜನಸಂಖ್ಯೆ 600. 18 ರಿಂದ 30 ವಯಸ್ಸಿನ ಮಹಿಳೆಯರೇ 300 ಮಂದಿ ಇದ್ದಾರೆ. ಇವರ್ಯಾರಿಗೂ ಇನ್ನು ಮದುವೆಯೇ ಆಗಿಲ್ಲ.

    ಆಮೇಲೆ ಇಲ್ಲಿನ ಸಂಪ್ರದಾಯದ ಪ್ರಕಾರ ಮದುವೆಯಾದ ಹುಡುಗಿಯರು ಅದೇ ಗ್ರಾಮದಲ್ಲೇ ಉಳಿಯುತ್ತಾರೆ. ಅಲ್ಲದೆ, ಇಲ್ಲಿ ಯುವತಿಯರು ಹುಡುಗರಿಂತ ಯಾವುದರಲ್ಲೂ ಕಮ್ಮಿ ಇಲ್ಲ. ತೋಟಗಾರಿಕೆ, ಕೃಷಿ ಸೇರಿದಂತೆ ಎಲ್ಲ ಕೆಲಸಗಳನ್ನು ತಾವೇ ನಿಭಾಯಿಸುತ್ತಾರೆ. (ಏಜೆನ್ಸೀಸ್​)

    ರಾತ್ರಿ ಮಲಗ್ತಿದ್ದಂತೆ ಅಮ್ಮನ ಮೊಬೈಲ್​ ತೆಗೆದುಕೊಳ್ತಿದ್ದ ಮಗ: ತಾಯಿಗೆ ಕಾದಿತ್ತು ಬಿಗ್​ ಶಾಕ್​!

    ಲೇಡಿ ಸಿಂಗಮ್​ ಖ್ಯಾತಿಯ ಮಹಿಳಾ ಅಧಿಕಾರಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಅಧಿಕಾರಿಯ ಕರಾಳ ಮುಖ ಬಯಲು!

    ವಿಚಾರಣೆಗೆ ಬರಬೇಕಾದ್ರೆ ಇದನ್ನು ನೆರವೇರಿಸಿ: ಎಸ್​ಐಟಿಗೆ ತಲೆನೋವಾದ ಸಿಡಿ ಲೇಡಿಯ ಮತ್ತೊಂದು ವಿಡಿಯೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts