More

    ಅಮೆರಿಕಾ ಸ್ಟೇಟ್ ಮಾಜಿ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮೃತ್ಯು – ಪ್ರಧಾನಿ ಮೋದಿ ಅಭಿಮಾನಿಯಾಗಿದ್ದ ಶತಾಯುಷಿ ರಾಜನೀತಿಜ್ಞ..

    Henry Kissinger has died at the age of 100
    ವಾಷಿಂಗ್ಟನ್​: ಇಂದಿರಾ ಗಾಂಧಿ ನಾಯಕತ್ವ ತಿರಸ್ಕರಿಸಿದ್ದ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ – ಅಮೆರಿಕಾ ಸಂಬಂಧ ವೃದ್ಧಿ ಕುರಿತು ಪ್ರತಿಪಾದಿಸುತ್ತ ಬಂದಿದ್ದ ಅಮೆರಿಕಾದ ಸುಪ್ರಸಿದ್ಧ ರಾಜನೀತಿಜ್ಞ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ 100 ನೇ ವಯಸ್ಸಿನಲ್ಲಿ ನಿಧನರಾದರು.

    ಇದನ್ನೂ ಓದಿ: ಮುಂಬೈ ಹೋಟೆಲ್​ನಲ್ಲಿ ಆ ಕರಾಳ ರಾತ್ರಿ! ಪ್ರವಾಸದ ಮಧ್ಯೆ ಕಾಶ್ಮೀರದ 500 ವಿದ್ಯಾರ್ಥಿನಿಯರಿಗೆ ಕಾದಿತ್ತು ಆಘಾತ
    ಕಿಸ್ಸಿಂಜರ್ ಗುರುವಾರ ಕನೆಕ್ಟಿಕಟ್‌ನಲ್ಲಿರುವ ಅವರ ಮನೆಯಲ್ಲಿ ನಿಧನರಾದರು. ಅವರ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ಅವರ ಸಾವಿಗೆ ಕಾರಣ ತಿಳಿಸಿಲ್ಲ.

    ಕಳೆದ ಒಂದು ದಶಕದಿಂದ ಅಮೆರಿಕಾ – ಭಾರತದ ಸಂಬಂಧ ದೃಢವಾಗಿಸುವ ನಿಟ್ಟಿನಲ್ಲಿ ಪ್ರತಿಪಾದಿಸುತ್ತಿದ್ದರು. 2014 ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದ ನಂತರ, ಮಾಜಿ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಕಿಸ್ಸಿಂಜರ್ ಅವರು ಭಾರತದೊಂದಿಗೆ ಬಲವಾದ ಬಾಂಧವ್ಯ ಹೊಂದುವುದನ್ನು ಪ್ರತಿಪಾದಿಸುತ್ತ ಬಂದಿದ್ದರು. ವಾಸ್ತವವಾಗಿ ಅವರು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿಯಾಗಿದ್ದರು ಎಂದು ಹಲವರು ಹೇಳುತ್ತಾರೆ.

    ಈ ವರ್ಷದ ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದಾಗ, ಕಿಸ್ಸಿಂಜರ್ ಆರೋಗ್ಯ ಸರಿಯಿಲ್ಲದಿದ್ದರೂ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಕಾರ್ಯದರ್ಶಿ ಜಂಟಿಯಾಗಿ ಆಯೋಜಿಸಿದ್ದ ಹೆನ್ರಿ ಕಿಸ್ಸಿಂಜರ್‌ರನ್ನು ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಫಾಗ್ಗಿ ಬಾಟಮ್ ಪ್ರಧಾನ ಕಚೇರಿಯ ಏಳನೇ ಮಹಡಿಯಲ್ಲಿರುವ ಐತಿಹಾಸಿಕ ಬೆಂಜಮಿನ್ ಫ್ರಾಂಕ್ಲಿನ್ ಕೋಣೆಗೆ ಗಾಲಿಕುರ್ಚಿಯಲ್ಲಿ ಆಗಮಿಸಿ ಪ್ರಧಾನಿ ಮೋದಿ ಅವರ ಭಾಷಣವನ್ನು ಆಲಿಸಿದ್ದರು.

    70 ರ ದಶಕದಲ್ಲಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಆಡಳಿತದಲ್ಲಿದ್ದಾಗ ಭಾರತದೊಂದಿಗಿನ ಅವರ ಸಂಬಂಧಗಳು ಹಳಸಿದ್ದವು. ಕಿಸ್ಸಿಂಜರ್ ಮತ್ತು ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಇಬ್ಬರೂ ಆಗಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಲು ಸಾಧ್ಯವಾಗಲಿಲ್ಲ. ಹೀಗಾಗಿ ಅಮೆರಿಕಾ ಚೀನಾದತ್ತ ಒಲವು ಹರಿಸಿತು ಎಂದು ಇತಿಹಾಸಕಾರರು ಹೇಳುತ್ತಾರೆ.

    ಕಿಸ್ಸಿಂಜರ್ ಸಲಹೆಯ ಮೇರೆಗೆ 70 ರ ದಶಕದಲ್ಲಿ ಯುಎಸ್​ ಚೇಂಬರ್ಸ್ ಆಫ್ ಕಾಮರ್ಸ್, ಯುಎಸ್​ ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್​ಐಬಿಸಿ) ಅನ್ನು ಸ್ಥಾಪಿಸಿತು. ಅವರು ಭಾರತ ಮತ್ತು ಜಪಾನ್ ಯುಎನ್ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಲು ಪ್ರತಿಪಾದಿಸಿದ್ದರು.

    ಗುಜರಾತ್ ಈಥರ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಏಳು ಕಾರ್ಮಿಕರ ಶವ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts