More

    ಮಾತ್ರಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ದುರಸ್ತಿಗೆ ಚಾಲನೆ

    ವಿಜಯವಾಣಿ ಸುದ್ದಿಜಾಲ ಮಂಗಳೂರು

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಂಗವಾಗಿ ಶ್ರೀವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಮಾತ್ರಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಲ್ಲಡ್ಕ ಗೀತಾ ರವೀಂದ್ರ ಪೂಜಾರಿಯವರಿಗೆ ಮಂಜೂರಾದ ವಾತ್ಸಲ್ಯ ಮನೆ ರಿಪೇರಿ ಕೆಲಸಕ್ಕೆ ಚಾಲನೆ ದೊರೆಯಿತು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಶೌರ್ಯ ತಂಡದ ಸದಸ್ಯರು ಹಾಗೂ ಪೆರ್ನೆ ವಲಯದ ಸದಸ್ಯರಿಂದ ವಾತ್ಸಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಏನಿದು ವಾತ್ಸಲ್ಯ ಕಾರ್ಯಕ್ರಮ

    ಧರ್ಮಸ್ಥಳ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಕಲ್ಪನೆಯೊಂದಿಗೆ ಪ್ರಾರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆ ಇವತ್ತು ರಾಜ್ಯಾದ್ಯಂತ ಲಕ್ಷಾಂತರ ಮಂದಿಗೆ ನೆರಳಾಗಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯ ಜೀವನವನ್ನು ನಡೆಸಲು ಸಹಕಾರಿಯಾಗಿದೆ. ರಾಜ್ಯದಲ್ಲಿ 12000 ಮಂದಿ ಅತ್ಯಂತ ಕಡುಬಡವ ವೃದ್ಧ ಕುಟುಂಬಗಳನ್ನು ಗುರುತಿಸಿ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 750 ರಿಂದ 3000 ಮೊತ್ತವನ್ನು ಪೂಜ್ಯರು ನೀಡುತ್ತಿದ್ದು, ವರ್ಷಕ್ಕೆ ಸುಮಾರು 10 ಕೋಟಿ ದುರ್ಬಲ ವರ್ಗದ ಜನರ ಹಸಿವನ್ನು ನೀಗಿಸಲು ನೆರವಾಗುತ್ತಿದೆ. ಈ ಕುಟುಂಬಗಳಲ್ಲಿ ಬಹಳಷ್ಟು ಮಂದಿಗೆ ಸರಿಯಾದ ಮನೆಗಳಿಲ್ಲದೇ ಕುಸಿದು ಬಿದ್ದಿರುವ ಗುಡಿಸಲಿನಲ್ಲಿ ಭಯದಿಂದ ಬದುಕುವುದನ್ನು ಮನಗಂಡ ಮಾತೃಶ್ರೀ ಹೇಮಾವತಿ ಅಮ್ಮನವರು ಅಂತಹ ದುಸ್ಥಿತಿಯಲ್ಲಿರುವ ನಿಜವಾದ ಫಲಾನುಭವಿಯನ್ನು ಗುರುತಿಸಿವಾತ್ಸಲ್ಯ ಮನೆಯನ್ನು ಕಟ್ಟಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಕಲ್ಲಡ್ಕ ಗೀತಾ ರವೀಂದ್ರ ಪೂಜಾರಿ ಅವರ ಮನೆ ಶಿಥಿಲಾವಸ್ಥೆಯಲ್ಲಿದ್ದು, ಶ್ರೀವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಮಾತ್ರಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಯೋಜನೆ ಕಾರ್ಯಗತವಾಗಲಿದೆ.

    ವಲಯದ ಮೇಲ್ವಿಚಾರಕರು ಸುಗುಣ ಶೆಟ್ಟಿ. ಸಂಯೋಜಕಿ ವಿದ್ಯಾ. ಮಾಧವ ತುಳಸಿ ಗಣೇಶ್ ನಾಯ್ಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts