More

    ವೈಜ್ಞಾನಿಕ ಕೃಷಿಯಿಂದ ಆದಾಯ ಹೆಚ್ಚಳ

    ದೇವದುರ್ಗ: ತೊಗರಿ ಬೆಳೆಯಲ್ಲಿ ಸುಧಾರಿತ ತಳಿ ಜಿ.ಆರ್.ಜಿ 811ರ ಅಭಿವೃದ್ಧಿಪಡಿಸಲಾಗಿದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ ಹೇಳಿದರು.

    ತೊಗರಿ ಬೆಳೆಯಲ್ಲಿ ಸುಧಾರಿತ ತಳಿ ಅಭಿವೃದ್ಧಿ

    ತಾಲೂಕಿನ ಹೇಮನಾಳ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಗಬ್ಬೂರು ರೈತ ಸಂಪರ್ಕ ಕೇಂದ್ರದಿ ಆಯೋಜಿಸಿದ್ದ ಸುಧಾರಿತ ತೊಗರಿ ತಳಿ ಜಿ.ಆರ್.ಜಿ. 811ರ ಪ್ರಾತೇಕ್ಷತೆ ಹಾಗೂ ತೊಗರಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ತೊಗರಿ ಬೆಳೆ ಸಂಗ್ರಹ ಬಗ್ಗೆ ರೈತರು ಹೆಚ್ಚಿನ ಜ್ಞಾನ ಪಡೆಯಬೇಕು. ತೊಗರಿಯಲ್ಲಿ ನೂತನ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯಗಳಿಸಬಹುದು ಎಂದು ಹೇಳಿದರು.

    ಕೃಷಿಕೀಟ ವಿಜ್ಞಾನಿ ಡಾ.ಕೃಷ್ಣ ಬಿರಾದಾರ್ ಮಾತನಾಡಿ, ತೊಗರಿಯಲ್ಲಿ ನವೀನ ತಂತ್ರಜ್ಞಾನಗಳಾದ ಬೀಜೋಪಚಾರ, ಕುಡಿ ಚಿವುಟುವುದು, ಪಲ್ಸ್ ಮ್ಯಾಜಿಕ್ ಬಳಸಿ ಪ್ರತಿ ಎಕರೆಗೆ 10ರಿಂದ 12ಕ್ವಿಂಟಾಲ್ ಇಳುವರಿ ಪಡೆಯಬಹುದು. ತೊಗರಿಯಲ್ಲಿ ಬರುವ ವಿವಿಧ ಕೀಟಗಳನ್ನು ಪ್ರಾರಂಭಿಕ ಹಂತದಲ್ಲಿ ಪ್ರತಿಎಕರೆಗೆ 5 ಮೋಹಕ ಬಲೆ ಹಾಗೂ ಜೈವಿಕ ಪೀಡೆನಾಶಕಗಳನ್ನು ಬಳಸಿ ಸಮಗ್ರ ಕೀಟ ಹಾಗೂ ರೋಗವನ್ನು ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಗುಣಮಟ್ಟದ ಬೆಳೆ ಬೆಳೆಯಬಹುದು ಎಂದು ಹೇಳಿದರು.

    ಕೃಷಿ ಅಧಿಕಾರಿ ಶಿವಕುಮಾರ್, ಸಿಬ್ಬಂದಿ ಬಸಲಿಂಗ, ಶಂಕರಗೌಡ, ರೈತರಾದ ಸಾಹೇಬಗೌಡ, ಶರಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts