More

    ಪೋಲಿಯೋ ಮುಕ್ತ ದೇಶವಾಗಿಸಲು ಸಹಕರಿಸಿ

    ಹಿರೇಕೆರೂರ: 5 ವರ್ಷದೊಳಗಿನ ಮಗುವಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ದೇಶವನ್ನಾಗಿಸಲು ಸಹಕರಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪೋಲಿಯೋ ಪ್ರಕರಣಗಳು ಅತ್ಯಂತ ಕಡಿಮೆಯಾಗುತ್ತಿದ್ದು, ಇದನ್ನು ಶಾಶ್ವತವಾಗಿ ತಡೆಗಟ್ಟಲು ಹಾಗೂ ಹೋಗಲಾಡಿಸಲು 5 ವರ್ಷದ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸುವುದು ಅತಿ ಅವಶ್ಯವಾಗಿದೆ ಎಂದರು.

    ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಪೋಲಿಯೋ ಮಹಾಮಾರಿಯಿಂದ ಈ ಹಿಂದೆ ಅನೇಕರು ಬಹಳ ತೊಂದರೆಯಿಂದ ಜೀವನ ನಡೆಸುತ್ತಿದ್ದು, ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಪೋಲಿಯೋ ಲಸಿಕೆ ಹನಿಯನ್ನು ಉಚಿತವಾಗಿ ನೀಡುತ್ತಿದೆ ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಜಡ್.ಆರ್. ಮಕಾಂದಾರ ಮಾತನಾಡಿ, ಜ. 31ರಂದು ಲಸಿಕಾ ಕೇಂದ್ರದಲ್ಲಿ, ಫೆ. 1ರಿಂದ 3 ರವರೆಗೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಒಟ್ಟು 144 ಬೂತ್​ಗಳನ್ನು ತೆರೆಯಲಾಗಿದ್ದು, ಈ ಕಾರ್ಯಕ್ರಮದಲ್ಲಿ 44 ಕಿರಿಯ ಮಕ್ಕಳ ಆರೋಗ್ಯ ಸಹಾಯಕಿಯರು, 232 ಆಶಾ ಕಾರ್ಯಕರ್ತೆಯರು, 330 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಬ್ಬರು ಹಿರಿಯ ಪುರುಷ ಆರೋಗ್ಯ ಸಹಾಯಕರು, 25 ಕಿರಿಯ ಪುರುಷ ಆರೋಗ್ಯ ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

    ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಉಪಾಧ್ಯಕ್ಷೆ ಸುಧಾ ಚಿಂದಿ, ತಹಸೀಲ್ದಾರ್ ಉಮಾ.ಕೆ.ಎ., ಜಿಪಂ ಸದಸ್ಯ ಎನ್.ಎಂ. ಈಟೇರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ರಮೇಶ ಕೋಡಿಹಳ್ಳಿ, ಕಂಠಾಧರ ಅಂಗಡಿ, ಸಿಡಿಪಿಒ ವಿಜಯಕುಮಾರ ಎಂ., ಡಾ.ಶ್ರೀಕಾಂತ ಆಚಾರ್ಯ, ಅಧಿಕಾರಿಗಳಾದ ಶಿವಪ್ರಸಾದ.ಬಿ.ಎಸ್., ಬಿ.ಎಚ್.ದುಗ್ಗತ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts