More

    ಪೋಲಿಯೋ ಹಾಕಿಸಿ ಅಂಗವೈಕಲ್ಯ ದೂರ ಮಾಡಿ; ಪುಟ್ಟಪ್ಪ ಮರಿಯಮ್ಮನವರ

    ರಾಣೆಬೆನ್ನೂರ: ಮಗುವಿಗೆ ಎರಡು ಹನಿ ಪೊಲಿಯೋ ಲಸಿಕೆ ಹಾಕಿಸುವ ಮೂಲಕ ಶಾಶ್ವತ ಅಂಗವೈಕಲ್ಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.
    ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಭಾನುವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ವತಿಯಿಂದ ಜೇಸಿ ಸಂಸ್ಥೆ, ರೋಟರಿ ಕ್ಲಬ್, ಇನ್ನರ್‌ವ್ಹಿಲ್ ಕ್ಲಬ್‌ಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ರೋಗ ಬಂದ ಮೇಲೆ ಪರಿತಪ್ಪಿಸುವುದಕ್ಕಿಂತ ಅದು ಬಾರದಂತೆ ಮುಂಜಾಗರೂಕತೆ ವಹಿಸಬೇಕು. ಆದ್ದರಿಂದ ಪಾಲಕರು ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಬೇಕು ಎಂದರು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಪ್ರಮುಖರಾದ ವೀರೇಶ ಮೋಟಗಿ, ವಾಸುದೇವ ಗುಪ್ತಾ, ವಿ.ಪಿ. ಲಿಂಗನಗೌಡ್ರ, ಶೋಭಾ ಜಂಬಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಡಾ. ಚಂಪಾ ಗಡಾದ, ಡಾ. ರಾಜು ಶಿರೂರ, ವೀರಣ್ಣ ಶೆಟ್ಟರ, ಜಯಶ್ರೀ ಬಣಕಾರ, ನಾಗರಾಜ ಕುಡುಪಲಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts