More

    ನಿಮಗ್ಯಾಕೆ ಸಹಾಯ..? ಕೆಲಸಕ್ಕೆ ಹೋಗ್ರೀ..

    ಬೆಳಗಾವಿ/ಬೈಲಹೊಂಗಲ: ಲಾಕ್‌ಡೌನ್‌ನಿಂದ ಉದ್ಯೋಗ, ಆದಾಯವಿಲ್ಲದೆ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸಿದ ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ವರ್ತನೆ ವಿರುದ್ಧ ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ‘ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಎಲ್ಲಾದರೂ ಕೆಲಸಕ್ಕೆ ಹೋಗಿ. ಇಲ್ಲಿಗೆ ಸುಮ್ಮನೆ ಬಂದು ಗುದ್ದಾಡಿ ಕೊಂಡು ಕೂರಬೇಡಿ..’ ಎಂದು ತಮ್ಮ ಬಳಿ ಸಹಾಯ ಕೇಳಲು ಬಂದ ಅಸಹಾಯಕರಿಗೆ ಶಾಸಕರು ಬೆದರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    ಲಾಕ್‌ಡೌನ್ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ಬೈಲಹೊಂಗಲ ಕ್ಷೇತ್ರದಲ್ಲಿ ಶಾಸಕರು ಯಾವುದೇ ಬಡವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿಲ್ಲ. ಆಹಾರ ಕಿಟ್ ಸಹ ವಿತರಿಸಿಲ್ಲ. ಬಡವರು, ಕೂಲಿಗಳು, ಮಹಿಳೆಯರು ಹಾಗೂ ಮಕ್ಕಳು ಆರ್ಥಿಕವಾಗಿ ಸಹಾಯ ಮಾಡುವಂತೆ ಕೈಮುಗಿದು ಕೇಳಿದ್ದಾರೆ. ತಮ್ಮ ಮನೆ ಬಾಗಿಲಿಗೇ ಸಹಾಯ ಯಾಚಿಸಿ ಬಂದವರನ್ನೂ ಬೆದರಿಸಿ ಕಳುಹಿಸಿರುವ ಶಾಸಕರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗತೊಡಗಿದೆ.

    ರಾಜ್ಯದ ಎಲ್ಲ ಶಾಸಕರು, ಸಚಿವರು, ವಿ.ಪ. ಸದಸ್ಯರು ಹಾಗೂ ಸಂಸದರು ತಮ್ಮ ಕ್ಷೇತ್ರದಲ್ಲಿನ ಜನರಿಗೆ ಆಹಾರ ಕಿಟ್ ಸೇರಿ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ. ಕೈಲಾದಷ್ಟು ಸಹಾಯ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬೈಲಹೊಂಗಲ ಶಾಸಕ ಕೌಜಲಗಿ ಅವರು ಸಹಾಯ ಕೇಳಿ ಮನೆಗೆ ಬಂದ ಬಡವರೊಂದಿಗೂ ದುರ್ವರ್ತನೆ ತೋರಿದ್ದಕ್ಕೆ ಅವರ ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೋಟ್ ಕೇಳಾಕ ಬರ‌್ರೀ ಸಾಹೇಬ್ರ…

    ಶಾಸಕ ಮಹಾಂತೇಶ ಕೌಜಲಗಿ ಅವರ ದರ್ಪದ ಮಾತು ಕೇಳಿ ಬೇಸರಗೊಂಡು ಅವರ ಮನೆಯಿಂದ ಬಡ ಮಹಿಳೆಯರು ವಾಪಸ್ ತೆರಳುವಾಗ, ‘ಎರಡನೇ ಸಲ ಹೀಗೆ ಮಾಡೋದು ನೀವು. ನಡೀರಿ, ನಡೀರಿ.. ವೋಟ್ ಕೇಳಲು ಬಂದಾಗ ನಮಗೂ ಹೇಳಾಕ್ ಬರ್ತೇತಿ ಸಾಹೇಬ್ರ.. ಬಿಡ್ರಿ, ಬಿಡ್ರಿ..’ ಎಂದು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts