More

    ಗೋ-ಕಾರ್ಟಿಂಗ್​ ದುರಂತ: ವಿದ್ಯಾರ್ಥಿನಿ ಸಾವಿಗೆ ಕಾರಣ ತಿಳಿಸಿ, ಗಂಭೀರ ಆರೋಪ ಮಾಡಿದ ಕುಟುಂಬಸ್ಥರು!

    ಹೈದರಾಬಾದ್​: ದುರಂತ ಘಟನೆಯಲ್ಲಿ ಮೃತಪಟ್ಟ 21 ವರ್ಷದ ಹೈದರಾಬಾದಿನ ಇಂಜಿನಿಯರ್​ ವಿದ್ಯಾರ್ಥಿನಿ ಶ್ರೀ ವರ್ಷಿಣಿ ಸಾವಿಗೆ ಗೋ-ಕಾರ್ಟಿಂಗ್​ ಸಂಘಟಕರ ನಿರ್ಲಕ್ಷ್ಯವೇ ಕಾರಣ ಎಂದು ಸಂತ್ರಸ್ತೆಯ ಕುಟುಂಬ ಗಂಭೀರ ಆರೋಪ ಮಾಡಿದೆ.

    ವರ್ಷಿಣಿ ತಮ್ಮ ಕುಟುಂಬದ ಜತೆಯಲ್ಲಿ ಬುಧವಾರ ಸಂಜೆ ಹೈದರಾಬಾದಿನ ಗುರ್ರಂ ಗುಡದಲ್ಲಿರುವ ಹ್ಯಾಸ್ಟನ್​​ ಗೋ-ಕಾರ್ಟಿಂಗ್​ಗೆ ತೆರಳಿದ್ದರು. ಅವಳಿ ಕಾರ್ಟಿನಲ್ಲಿ ವರ್ಷಿಣಿ ತಮ್ಮ ಅಂಕಲ್​ರೊಂದಿಗೆ ಕುಳಿತಿದ್ದರು. ಸೋದರ ಸಂಬಂಧಿ ಮತ್ತು ಕುಟುಂಬದ ಸ್ನೇಹ ಬಳಗದಲ್ಲಿ ಗೋ-ಕಾರ್ಟ್​ ಚಾಲನೆ ಮಾಡಿದವರಲ್ಲಿ ವರ್ಷಿಣಿ ಮೊದಲಿಗರೂ ಆಗಿದ್ದರು.

    ಇದ್ದಕ್ಕಿದ್ದಂತೆ ಒಂದು ಚಕ್ರಕ್ಕೆ ವರ್ಷಿಣಿಯ ಕೇಶ ಸಿಲುಕಿಕೊಂಡ ಪರಿಣಾಮ ಗೋ-ಕಾರ್ಟಿಂಗ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದಳು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಸಹ ಮಾರ್ಗಮಧ್ಯೆದಲ್ಲೇ ಆಕೆ ದುರಂತ ಸಾವಿಗೀಡಾದಳು. ಇದೀಗ ಪ್ರಕರಣಕ್ಕೆ ಗೋ-ಕಾರ್ಟ್​ ಆಯೋಜಕರ ನಿರ್ಲಕ್ಷವೇ ಕಾರಣ ಎಂದು ಕುಟುಂಬ ಆರೋಪಿಸಿದೆ.

    ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಮಹತ್ವದ ತೀರ್ಪು ನೀಡಿದ ಮದ್ರಾಸ್​ ಹೈಕೋರ್ಟ್​!

    ಈ ಬಗ್ಗೆ ಮಾತನಾಡಿರುವ ಸೋದರ ಸಂಬಂಧಿ ನರೇಶ್​, ನಾನು ಸಹ ಗೋ-ಕಾರ್ಟಿಂಗ್​ಗೆ ಹೋಗಿದ್ದೆ. ಆಯೋಜಕರು ಹೆಚ್ಚು ಎಚ್ಚರಿಕೆ ವಹಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ. ನಾವೆಲ್ಲರೂ ಸಹ ಹೆಲ್ಮೆಟ್​ ಧರಿಸಿದ್ದೆವು. ಅದನ್ನೂ ಸಹ ಕಟ್ಟಲಾಗಿತ್ತು. ಆದರೆ, ವರ್ಷಿಣಿಗೆ ನೀಡಿದ್ದ ಹೆಲ್ಮೆಟ್​ ತುಂಬಾ ಸಡಿಲವಾಗಿತ್ತು. ಚಾಲನೆ ವೇಳೆ ಹೆಲ್ಮೆಟ್​ ಕಳಚಿಕೊಂಡ ಪರಿಣಾಮ ಅವಳ ಕೂದಲು ಗೋ-ಕಾರ್ಟ್​ ಸೀಟಿನ ಹಿಂಭಾಗದ ಬಲಭಾಗದಲ್ಲಿರುವ ಇಂಜಿನ್​ಗೆ ಸಿಲುಕಿ ಅಪಘಾತ ಸಂಭವಿಸಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಜೀವ ಉಳಿಯಲಿಲ್ಲ ಎಂದಿದ್ದಾರೆ.

    ಗೋ-ಕಾರ್ಟಿನ ಇಂಜಿನ್​ ಸಹ ತೆರೆದಿತ್ತು ಎಂದು ಆರೋಪಿಸಿರುವ ನರೇಶ್​, ಸಾಮಾನ್ಯವಾಗಿ ಇಂಜಿನ್​ ಮುಚ್ಚಿರಬೇಕು. ಹೀಗಿದ್ದಾಗ ಮಾತ್ರ ಇಂತಹ ಅಪಘಾತಗಳನ್ನು ತಡೆಬಹುದು ಎಂದಿದ್ದಾರೆ. ವರ್ಷಣಿಯನ್ನು ಆಸ್ಪತ್ರೆಗೆ ದಾಖಲಿಸುವಾಗ ಅವಳ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆಂತರಿಕ ಗಾಯದಿಂದ ಬಳಲಿದ್ದಳು. ಆಕೆಯ ಬೆನ್ನುಹುರಿಗೂ ಗಾಯವಾಗಿತ್ತು ಎಂದು ಕುಟುಂಬದವರು ಹೇಳಿದ್ದಾರೆ.

    ಇದನ್ನೂ ಓದಿ: ಕಾಲಿವುಡ್​ ಸ್ಟಾರ್​ ನಟ ವಿಷ್ಣು ವಿಶಾಲ್​ ಕುಟುಂಬದ ವಿರುದ್ಧ ತಿರುಗಿಬಿದ್ದ ಹಾಸ್ಯನಟ ಸೂರಿ..!

    ಈ ಸಂಬಂಧ ಮೀರ್​ಪೇಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಮಾತನಾಡಿರುವ ಇನ್ಸ್​ಪೆಕ್ಟರ್​ ಎಂ ಮಹೇಂದರ್​ ರೆಡ್ಡಿ, ಐಪಿಸಿ ಸೆಕ್ಷನ್​ 304ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ, ಕರೊನಾ ಹಿನ್ನೆಲೆಯಲ್ಲಿ ಮನರಂಜನಾ ತಾಣಗಳಿಗೆ ಇನ್ನು ಅನಮತಿ ನೀಡಿಲ್ಲ. ಹೀಗಿದ್ದರೂ ತೆರೆಯುವ ಮೂಲಕ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ವಿಪತ್ತು ನಿರ್ವಹಣಾ ಸೆಕ್ಷನ್​ ಅಡಿಯಲ್ಲೂ ಕೇಸು ದಾಖಲಿಸಿದ್ದೇವೆ. ತನಿಖೆ ಆರಂಭವಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಗೋ-ಕಾರ್ಟಿಂಗ್:​ ಚಕ್ರಕ್ಕೆ ತಲೆಗೂದಲು ಸಿಲುಕಿ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts