ಗೋ-ಕಾರ್ಟಿಂಗ್:​ ಚಕ್ರಕ್ಕೆ ತಲೆಗೂದಲು ಸಿಲುಕಿ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ!

ಹೈದರಾಬಾದ್​: ಎಷ್ಟೋ ಜನ ಕೂದಲೆಳೆಯ ಅಂತರದಲ್ಲಿ ಎಂಥೆಂಥದ್ದೋ ಅಪಾಯ-ಅಪಘಾತಗಳಿಂದ ಪಾರಾಗುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ತಲೆ ಕೂದಲು ಸಿಲುಕಿಕೊಂಡಿದ್ದರಿಂದಾಗಿಯೇ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಹೈದರಾಬಾದ್​ನ ಬಿ-ಟೆಕ್​ ವಿದ್ಯಾರ್ಥಿನಿ ವರ್ಷಿಣಿ ಗುರುವಾರ ಗೋ-ಕಾರ್ಟಿಂಗ್ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾಳೆ. ಮೀರಪಟ್​ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ರಂಗುಡದಲ್ಲಿನ ಪ್ಲೇ ಜೋನ್​​ನಲ್ಲಿ ಆಕೆ ಗೋ-ಕಾರ್ಟಿಂಗ್ ಹೋದಾಗ, ಅದರ ಒಂದು ಚಕ್ರಕ್ಕೆ ಆಕೆಯ ಕೇಶ ಸಿಲುಕಿಕೊಂಡಿದೆ. ಪರಿಣಾಮ ಗೋ-ಕಾರ್ಟಿಂಗ್ ಅಪಘಾತಕ್ಕೀಡಾಗಿ ಆಕೆ ಜೀವ ಕಳೆದುಕೊಂಡಿದ್ದಾಳೆ. ಅಪಘಾತದ ತೀವ್ರತೆಗೆ ಆಕೆ ಧರಿಸಿದ್ದ ಹೆಲ್ಮೆಟ್​ ಕೂಡ ಮುರಿದು … Continue reading ಗೋ-ಕಾರ್ಟಿಂಗ್:​ ಚಕ್ರಕ್ಕೆ ತಲೆಗೂದಲು ಸಿಲುಕಿ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ!