More

    ಇನ್ನೂ ಬದಲಾಗಿಲ್ಲ ನಾಮಫಲಕ, ಹೆಬ್ರಿ ತಾಲೂಕಿನ ಕಚೇರಿಗಳಲ್ಲಿ ಕಾರ್ಕಳ ಎಂದೇ ಉಲ್ಲೇಖ

    ನರೇಂದ್ರ ಎಸ್. ಮರಸಣಿಗೆ
    ಹೆಬ್ರಿ ತಾಲೂಕು ರಚನೆಗೊಂಡು ಮೂರು ವರ್ಷ ಕಳೆದರೂ ಸರ್ಕಾರಿ ಇಲಾಖೆಯ ನಾಮಫಲಕಗಳಲ್ಲಿ ಮಾತ್ರ ಕಾರ್ಕಳ ತಾಲೂಕು ಎಂದೇ ಬರೆಯಲಾಗಿದೆ. ಇದು ಇಲಾಖೆಯ ಅಧಿಕಾರಿಗಳ ಅಸಮರ್ಥತೆ ಎತ್ತಿ ತೋರಿಸುತ್ತದೆ.

    ಕಾರ್ಕಳ ತಾಲೂಕಿನಿಂದ ವಿಭಜನೆಗೊಂಡ ಹೆಬ್ರಿ ತಾಲೂಕಿನ ಶಾಲಾ ಕಾಲೇಜು, ಆಸ್ಪತ್ರೆ, ಗ್ರಾಮ ಪಂಚಾಯಿತಿ ಹಾಗೂ ಹಾಸ್ಟೆಲ್ಗಳ ನಾಮಫಲಕಗಳು ಬದಲಾಗಿಲ್ಲ. ಇವುಗಳಲ್ಲಿ ಇನ್ನೂ ಕಾರ್ಕಳ ತಾಲೂಕು ಎಂದೇ ಇದೆ. ಇದು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಹೊಸದಾಗಿ ರಚನೆಗೊಂಡ ಸರ್ಕಾರಿ ಇಲಾಖೆ ನಾಮಫಲಕಗಳಲ್ಲಿ ಮಾತ್ರ ಹೆಬ್ರಿ ತಾಲೂಕು ಎಂದು ಪ್ರಕಟಗೊಂಡಿದೆ.
    ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಕಡೆ ಕಾರ್ಕಳ ತಾಲೂಕಿನ ನಾಮಫಲಕಗಳು ಕಂಡುಬರುತ್ತಿದೆ. ಹೆಬ್ರಿಯಲ್ಲಿ ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಹುದ್ದೆ ಮಂಜೂರಾಗಿಲ್ಲ. ನಾಮಫಲಕ ತಿದ್ದುಪಡಿ ಮಾಡುವುದು ಆಯಾ ಇಲಾಖೆಗಳಿಗೆ ಸಂಬಂಧಪಟ್ಟ ಕೆಲಸವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೃದಿಂದ ಜನರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ.

    ಹೆಸರಿಗಷ್ಟೇ ತಾಲೂಕು ಕೇಂದ್ರ: ಬಹುತೇಕ ಕಚೇರಿಗಳು ಕಾರ್ಕಳದಲ್ಲಿವೆ. ಒಂಬತ್ತು ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ನಾಲ್ಕು ಮಂದಿ ಗ್ರಾಮಲೆಕ್ಕಿಗರು ಇದ್ದಾರೆ. ಪಿಡಿಒ ಹಾಗೂ ಕಾರ್ಯದರ್ಶಿಗಳು ಬೇರೆ ಪಂಚಾಯಿತಿ ಚಾರ್ಜ್‌ನಲ್ಲಿದ್ದಾರೆ. ಒಂದು ವೇಳೆ ರಜೆಯಲ್ಲಿ ಹೋದರೆ ಜನರ ಸಮಸ್ಯೆ ಕೇಳುವವರಿಲ್ಲ. ಅಧಿಕಾರಿಗಳ ಕೊರತೆಯಿಂದ ಕಡತ ವಿಲೇವಾರಿ ವಿಳಂಬವಾಗುತ್ತಿದೆ.

    ಎರಡು ತಾಲೂಕುಗಳಿಗೆ ಓರ್ವ ತಹಸೀಲ್ದಾರ್: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಿಗೆ ಒಬ್ಬರೇ ತಹಸೀಲ್ದಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ಮಧ್ಯಾಹ್ನ ಪಾಳಿಯಲ್ಲಿ ಎರಡು ತಾಲೂಕಿನಲ್ಲಿ ಒಬ್ಬರೇ ನಿರ್ವಹಿಸಬೇಕಿದೆ. ಜನರ ಹಿತದೃಷ್ಟಿಯಲ್ಲಿ ಶೀಘ್ರದಲ್ಲಿ ಪ್ರತ್ಯೇಕ ತಹಸೀಲ್ದಾರ್ ನಿಯೋಜನೆಯಾಗಬೇಕಿದೆ.

    ಆರಂಭವಾಗಲಿರುವ ಕಚೇರಿ: ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಖಜಾನೆ, ಶಿಕ್ಷಣ, ಗ್ರಂಥಾಲಯ, ಪಶುಸಂಗೋಪನೆ ಇದ್ದಾವೆ. ಉಪ ನೋಂದಣಿ ಕಚೇರಿ, ಕೃಷಿ, ತೋಟಗಾರಿಕೆ, ಅಗ್ನಿಶಾಮಕ, ಪಿಡಬ್ಲುೃಡಿ, ಜಲಾನಯನ ಹಾಗೂ ನೀರಾವರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬರಬೇಕಾಗಿದೆ.

    ನಾಮಫಲಕ ಬದಲಾವಣೆ ಕುರಿತು ಆಯಾ ಇಲಾಖೆಗಳು ಮಾಡಬೇಕಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಬದಲಾವಣೆಗೆ ಸೂಚಿಸುವುದು.
    ಕೂರ್ಮಾರಾವ್ ಜಿಲ್ಲಾಧಿಕಾರಿ

    ಹೆಬ್ರಿ ತಾಲೂಕು ಆದರೂ ಹಲವು ಸರ್ಕಾರಿ ನಾಮಫಲಕಗಳಲ್ಲಿ ಕಾರ್ಕಳ ತಾಲೂಕು ಎಂದೇ ಪ್ರಕಟಿಸಲಾಗಿದೆ. ಅಧಿಕಾರಿಗಳ ಕೊರತೆಯಿಂದ ಹೆಬ್ರಿ ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ.
    ಕುಚ್ಚೂರು ಶ್ರೀಕಾಂತ್ ಪೂಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts