More

    ಡಿ.4ರಿಂದ ರಾಜ್ಯದಲ್ಲಿ ಭಾರಿ ಮಳೆ

    ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ 24 ಗಂಟೆಯೊಳಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಡಿ.2 ಅಥವಾ 3ರಂದು ಕನ್ಯಾಕುಮಾರಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.

    ಇದರ ಪರಿಣಾಮ ರಾಜ್ಯದಲ್ಲಿ ಡಿ.4ರಿಂದ 2 ದಿನ ಭಾರಿ ಮಳೆಯಾಗಲಿದೆ. ಶ್ರೀಲಂಕಾದ ಟ್ರಿಂಕಾಮಲೀಯ 680 ಕಿಮೀ ದೂರದಲ್ಲಿ ಹಾಗೂ ಕನ್ಯಾಕುಮಾರಿಯ 1,090 ಕಿಮೀ ಅಂತರದಲ್ಲಿ ಸದ್ಯ ಮಾರುತಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರಿನಲ್ಲಿ ಡಿ.4ರಂದು ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ. ಡಿ.5ರಂದು ಈ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಸದ್ಯ ಒಣಹವೆ ಮುಂದುವರಿದಿದೆ. ರಾಜ್ಯದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಡಿ.1ರಿಂದ ಡಿ.3ರವರೆಗೆ ಕೆಲ ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

    ‘ರೋಹಿಣಿ ಸಿಂಧೂರಿ ಐಎಎಸ್‌ ಪಾಸ್​ ಮಾಡಿರೋದೇ ಅನುಮಾನ…’

    ನಿಖಿಲ್​-ಪ್ರಜ್ವಲ್ ಒಟ್ಟಾಗಿ ಯುದ್ಧಕ್ಕೆ ಹೋಗಲಿ..! ಚಿಕ್ಕಪ್ಪ-ದೊಡ್ಡಪ್ಪನ ಎದುರಲ್ಲೇ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts