More

    ಕರಾವಳಿಯಾದ್ಯಂತ ಧಾರಾಕಾರ ಮಳೆ

    ಮಂಗಳೂರು: ದಕ್ಷಿಣ ಕನ್ನಡ ಸಹಿತ ಕರಾವಳಿಯಾದ್ಯಂತ ಮಂಗಳವಾರ ಧಾರಾಕಾರ ಮಳೆಯಾಗಿದೆ. ಇಲ್ಲಿನ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ಮೈದುಂಬಿ ಹರಿಯುತ್ತಿವೆ.

    ನಗರ ಹಾಗೂ ಆಸುಪಸಿನ ಪಡೀಲ್, ಕಣ್ಣೂರು, ಅಡ್ಯಾರ್, ಮರೋಳಿ ಮುಂತಾದೆಡೆ ಮಳೆಯ ಕೆಂಪು ನೀರು ತೋಡಿನಂತೆ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಹರಿದಿದೆ. ಕೆಲವು ದಿನಗಳಿಂದ ನಿರಂತರ ಸುರಿಯುತ್ತಿದ್ದ ಮಳೆಯಿಂದ ನಗರದ ಮಾಲೆಮಾರ್, ಬೈಕಂಪಾಡಿಯ ಚಿತ್ರಾಪುರ, ಮೇರಿಹಿಲ್ ಹೆಲಿಪ್ಯಾಡ್, ಕಾವೂರು- ಬೊಲ್ಪುಗುಡ್ಡೆ, ಸುಲ್ತಾನ್ ಬತ್ತೇರಿ ಮುಂತಾದ ಕಡೆಗಳ ಒಳರಸ್ತೆಗಳು ಭಾಗಶಃ ಕೊಚ್ಚಿಹೋಗಿದೆ.

    ಲೇಡಿಹಿಲ್- ಲಾಲ್‌ಬಾಗ್ ರಸ್ತೆ ನಡುವೆ ಮರವೊಂದು ಉರುಳಿದ್ದು, ಒಂದು ತಂತಿಕಂಬಕ್ಕೆ ಹಾನಿಯಾಗಿದೆ. ಪಚ್ಚನಾಡಿ ವಾರ್ಡ್‌ನ ಭಟ್ರಕೋಡಿ ಪ್ರದೇಶದ ಸುಜಯ್ ಡಿಸಿಲ್ವ ಮನೆ ಸಂಪರ್ಕಿಸುವ ರಸ್ತೆ ಬದಿ ತಡೆಗೋಡೆ ಕುಸಿದು ಹಾನಿಯಾಗಿದೆ.

    ಗುರುಪುರ ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡೆಯ ಬುಡದ ಮಣ್ಣು ಕುಸಿದು ಆತಂಕ ಎದುರಾಗಿದೆ. ಮಂಗಳವಾರ ರಸ್ತೆಯ ಒಂದು ಕಡೆಯಿಂದ ಸಂಚಾರ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳು ದುರಸ್ತಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts