More

    ಧರಣಿ ತಂಪಾಗಿಸಿದ ಭರಣಿ ಮಳೆ ; ರೈತರ ಮೊಗದಲ್ಲಿ ಹರುಷ

    ತುಮಕೂರು: ವರ್ಷದ ಮೊದಲ ಭರ್ಜರಿ ವರ್ಷಧಾರೆ ಜಿಲ್ಲೆಯ ರೈತರ ಮೊಗದಲ್ಲಿ ಹರುಷ ಉಕ್ಕಿಸಿದೆ. ಬುಧವಾರ ಬೆಳಗಿನ ಜಾವ ಜಿಲ್ಲಾದ್ಯಂತ ಸರಾಸರಿ 17.73 ಮಿ.ಮೀ., ಪ್ರಮಾಣ ಮಳೆಯಾಗಿದೆ.

    ಕೊರಟಗೆರೆ ತಾಲೂಕಿನಲ್ಲಿ ಅತೀ ಹೆಚ್ಚು 36 ಮಿ.ಮೀ.,ಮಳೆಯಾಗಿದ್ದರೆ, ತಿಪಟೂರಿನಲ್ಲಿ ಅತೀ ಕಡಿಮೆ 0.1ಮಿ.ಮೀ., ಮಳೆಯಾಗಿದೆ. ಯಾವುದೇ ಅನಾಹುತಗಳಾಗಿಲ್ಲ. ಇನ್ನುಳಿದಂತೆ ತುಮಕೂರು ತಾಲೂಕು 33.1 ಮಿ.ಮೀ., ಗುಬ್ಬಿ-19ಮಿ.ಮೀ., ಕುಣಿಗಲ್-22.5 ಮಿ.ಮೀ., ಮಧುಗಿರಿ-29ಮಿ.ಮೀ., ಪಾವಗಡ-23.8ಮಿ.ಮೀ., ಶಿರಾ-10.4ಮಿ.ಮೀಟರ್, ತುರುವೇಕೆರೆ-5.5ಮಿ.ಮೀ., ಚಿಕ್ಕನಾಯ ಕನಹಳ್ಳಿ-0.2 ಮಿ.ಮೀ., ಮಳೆಯಾಗಿದೆ.

    ಶೆಟ್ಟಿಹಳ್ಳಿ ಅಂಡರ್ ಪಾಸ್ ಈಜುಕೊಳ: ನಗರದಲ್ಲಿ ಬುಧವಾರ ಬೆಳಗಿನ ಜಾವ ಸುರಿದ ಮಳೆಯಿಂದ ಶೆಟ್ಟಿಹಳ್ಳಿ ರೈಲ್ವೆ ಅಂಡರ್ ಪಾಸ್ ಈಜುಕೊಳದಂತಾಗಿದ್ದು, ಅಂಡರ್ ಪಾಸ್‌ನಲ್ಲಿ ಮಳೆ ನೀರು ನಿಂತು ಜನರು ಹಾಗೂ ವಾಹನಗಳ ಸಂಚಾರಕ್ಕೆ ಗಂಟೆಗಟ್ಟಲೆ ತೊಂದರೆಯಾಯಿತು. ಬೆಳಗ್ಗೆ 5.10ಕ್ಕೆ ಆರಂಭವಾದ ಮಳೆ 45 ನಿಮಿಷಕ್ಕೂ ಹೆಚ್ಚು ಕಾಲ ಬಿರುಸಾಗಿ ಸುರಿಯಿತು. ಮಧ್ಯಾಹ್ನ 2ಗಂಟೆ ನಂತರ ಶೆಟ್ಟಿಹಳ್ಳಿ ರೈಲ್ವೆ ಅಂಡರ್ ಪಾಸ್ ಸಂಚಾರಕ್ಕೆ ಅನುವಾಯಿತು. ಕುಣಿಗಲ್ ರೈಲ್ವೆ ಅಂಡರ್ ಪಾಸ್‌ನಲ್ಲೂ ನೀರು ಹರಿಯುತ್ತಿತ್ತು.
    ತಗ್ಗುಪ್ರದೇಶಗಳಿಗೆ ನುಗ್ಗಿದ ಮಳೆನೀರು: ನಗರದ ಸಿದ್ಧಗಂಗಾ ಬಡಾವಣೆ ಸೇರಿ ಹಲವು ಕಡೆ ರಾಜಗಾಲುವೆ ತುಂಬಿ ಮಳೆ ನೀರು ತಗ್ಗುಪ್ರದೇಶಗಳಿಗೆ ನುಗ್ಗಿತ್ತು.

    ಮಧುಗಿರಿಯಲ್ಲೂ ಮಳೆಸಿಂಚನ: ಮಧುಗಿರಿ ತಾಲೂಕಿನಲ್ಲಿ ಬುಧವಾರ ಬೆಳಗ್ಗೆ ಸುರಿದ ಮಳೆ ಜಾನುವಾರುಗಳ ಮೇವಿಗೆ ಸಹಕಾರಿಯಾಗಿದೆ. ಭರಣಿ ಮಳೆ ಬಂದರೆ ಧರಣಿಯಲ್ಲಿ ಫಲ ಎಂಬ ಮಾತಿನಂತೆ ರೈತರು ಮಂದಹಾಸಗೊಂಡಿದ್ದಾರೆ. ಮಧುಗಿರಿ 21 ಮಿ.ಮೀ., ಮಿಡಿಗೇಶಿ 35 ಮಿ.ಮೀ., ಐಡಿಹಳ್ಳಿ 26 ಮಿ.ಮೀ., ಕೊಡಿಗೇನಹಳ್ಳಿ 11 ಮಿ.ಮೀ., ಬ್ಯಾಲ್ಯೃ 14 ಮಿ.ಮೀ., ಮಳೆಯಾಗಿದ್ದು, ಪಟ್ಟಣಕ್ಕೆ ನೀರೊದಗಿಸುವ ಚೋಳನಹಳ್ಳಿ ಕೆರೆಗೆ ಕಮ್ಮನಕೋಟೆ ಹಾಗೂ ಮಾರಿ ಬೀಳು ಕಡೆಯಿಂದ ದೊಡ್ಡ ಹರಿವು ಹರಿದು ಬಂದಿದ್ದು, ಜನ ತಂಡೋಪತಂಡವಾಗಿ ತೆರಳಿ ಕೆರೆಗೆ ನೀರು ಹರಿದಿರುವುದನ್ನು ವೀಕ್ಷಿಸಿ ಸಂತಸಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts